ಪ್ರಧಾನ ಸುದ್ದಿ

ಬೆಲಾರಸ್ ಸಾಹಿತಿ ಸ್ವೆಟ್ಲಾನ ಅಲೆಕ್ಸಿವಿಚ್ ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

Guruprasad Narayana

೬೭ ವರ್ಷದ ಬೆಲಾರಸ್ ದೇಶದ ಲೇಖಕಿ ಸ್ವೆಟ್ಲಾನ ಅಲೆಕ್ಸಿವಿಚ್ ಅವರಿಗೆ ೨೦೧೫ರ ನೊಬೆಲ್  ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ನೊಬೆಲ್  ಸಾಹಿತ್ಯ ಪ್ರಶಸ್ತಿ ಪಡೆದ ೧೪ನೆಯ ಮಹಿಳೆಯಾಗಿ ಸ್ವೆಟ್ಲಾನ ಅಲೆಕ್ಸಿವಿಚ್ ಹೊರಹೊಮ್ಮಿದ್ದಾರೆ.

ಚೆರ್ನೋಬಿಲ್ ಅಣು ದುರಂತ, ಎರಡನೆ ವಿಶ್ವ ಯುದ್ಧ ವಿಷಯಗಳ ಬಗ್ಗೆ ಸಾಹಿತ್ಯ ರಚಿಸಿರುವುದು ಈ ಲೇಖಕಿಯ ವಿಶೇಷ. ಪತ್ರಿಕೋದ್ಯಮದ ಕೌಶಲ್ಯ ಕೂಡ ಇವರ ಸಾಹಿತ್ಯದಲ್ಲಿ ಮುಂಚೂಣಿಯಾಗಿ ಕಂಡುಬರುತ್ತದೆ.

ಕಳೆದ ವರ್ಷ ಫ್ರೆಂಚ್ ಬರಹಗಾರ ಪ್ಯಾಟ್ರಿಕ್ ಮೋಡಿಯಾನೋ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರೆತಿತ್ತು.

SCROLL FOR NEXT