ಔಷಧ ಮಾರಾಟ ಬಂದ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ನಾಳೆ ರಾಷ್ಟ್ರಾದ್ಯಂತ ಔಷಧ ಅಂಗಡಿ ಬಂದ್

ಕೇಂದ್ರ ಸರ್ಕಾರವು ಔಷಧ ಮತ್ತು ಕಾಂತಿವರ್ಧಕ ಕಾಯಿದೆಗೆ ತಿದ್ದುಪಡಿ ತಂದು ಆನ್ ಲೈನ್ ಮುಖಾಂತರ ಔಷಧ ಮಾರಾಟಕ್ಕೆ ಹೊರಟಿರುವ ಕ್ರಮ ಖಂಡಿಸಿ ಔಷಧ ವ್ಯಾಪಾರಿಗಳು ಅ. 14 ರಂದು ರಾಷ್ಟ್ರಾದ್ಯಂತ ಔಷಧ ಅಂಗಡಿ ಬಂದ್‍ಗೆ ಕರೆ ನೀಡಿದ್ದಾರೆ...

ಬೆಂಗಳೂರು: ಕೇಂದ್ರ ಸರ್ಕಾರವು ಔಷಧ ಮತ್ತು ಕಾಂತಿವರ್ಧಕ ಕಾಯಿದೆಗೆ ತಿದ್ದುಪಡಿ ತಂದು ಆನ್ ಲೈನ್ ಮುಖಾಂತರ ಔಷಧ ಮಾರಾಟಕ್ಕೆ ಹೊರಟಿರುವ ಕ್ರಮ ಖಂಡಿಸಿ ಔಷಧ ವ್ಯಾಪಾರಿಗಳು ಅ. 14 ರಂದು ರಾಷ್ಟ್ರಾದ್ಯಂತ ಔಷಧ ಅಂಗಡಿ ಬಂದ್‍ಗೆ ಕರೆ ನೀಡಿದ್ದಾರೆ.

ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಬೃಹತ್ ಬೆಂಗಳೂರು ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ಅಸೋಸಿಯೇಷನ್ ಅಂದು ಬೆಳಗ್ಗೆ ಸುಮಾರು 5 ಸಾವಿರ ಮಂದಿ ಜತೆಗೂಡಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಿದೆ. ಆಸ್ಪತ್ರೆಗಳಲ್ಲಿರುವ ಔಷಧ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಔಷಧ ಅಂಗಡಿಗಳು ಬಂದ್ ಆಗಲಿವೆ. ಈಗಾಗಲೇ ಕೆಲವು ಅಂಗಡಿಗಳಲ್ಲಿ ವೈದ್ಯರ ಶಿಫಾರಸು ಇಲ್ಲದೆ ಔಷಧ ನೀಡುತ್ತಿರುವುದರಿಂದ ಅನಾಹುತ ಹೆಚ್ಚಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದು ಆನ್‍ಲೈನ್‍ನಲ್ಲಿ ಔಷಧ ದೊರೆತರೆ ದೇಶದ ಪರಿಸ್ಥಿತಿ ಏನಾಗಬಹುದು?

ಡಿಜಿಟಲ್ ಇಂಡಿಯಾ ಮಾಡಲು ಹೊರಟಿರುವ ಕೇಂದ್ರ ಕಾರ್ಪೊರೇಟ್ ಕುಳಗಳ ಹಿಡಿತಕ್ಕೆ ಸಿಲುಕಿ ಜನರ ಜೀವನದೊಂದಿಗೆ ಆಟವಾಡಲು ಹೊರಟಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ. ಮಾಯಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಭಾರತವನ್ನು ಡಿಜಿಟಲ್ ಇಂಡಿಯಾವನ್ನಾಗಿ ರೂಪಿಸುವುದು ಒಳ್ಳೆಯದು. ಆದರೆ ಸೂಕ್ಷ್ಮ ವಿಚಾರಕ್ಕೂ ಅನ್ವಯಿಸುವುದು ಸರಿಯಲ್ಲ. ದೇಶಾದ್ಯಂತ 8 ಲಕ್ಷ ಔಷಧ ಉದ್ಯಮಿಗಳಿದ್ದಾರೆ. ಒಂದೂವರೆ ಕೋಟಿ ಔಷಧ ಅಂಗಡಿಗಳಿವೆ. ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಅವಕಾಶ ನೀಡಿದರೆ ಇವರೆಲ್ಲ ಬೀದಿ ಪಾಲಾಗುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ಲಾಭ ಮಾಡಿಕೊಳ್ಳುತ್ತಾರೆ. ನಿರ್ಬಂಧಿತ ಔಷಧ ಜನರ ಕೈಗೆ ಸಿಕ್ಕರೆ ದುರಂತ ಸಂಭವಿಸುವುದು ಗ್ಯಾರಂಟಿ. ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿ ತಂದು ಕೊಡುವಷ್ಟರಲ್ಲಿ ಜೀವ ಹೋಗಿರುತ್ತದೆ.

ಏನೇ ಆದರೂ ಆನ್‍ಲೈನ್ ಮುಖಾಂತರ ಔಷಧ ಮಾರಾಟ  ಸರಿಯಲ್ಲ. ಇದನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೆ. ಕೃಷ್ಣಕುಮಾರ್, ವಿ.ಕೆ. ರಾಘವೇಂದ್ರ, ರಾಜು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT