ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಹತ್ತು ದಿನಕ್ಕೊಂದು ಕೊಲೆ, 4 ದಿನಕ್ಕೊಂದು ಅತ್ಯಾಚಾರ..!

ರಾಜ್ಯದಲ್ಲಿ ಪ್ರತಿ ಹತ್ತು ದಿನಗಳಿಗೊಮ್ಮೆ ದಲಿತ ಅಥವಾ ಆದಿವಾಸಿಯ ಕೊಲೆ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಆದಿವಾಸಿ ಇಲ್ಲವೇ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ...

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಹತ್ತು ದಿನಗಳಿಗೊಮ್ಮೆ ದಲಿತ ಅಥವಾ ಆದಿವಾಸಿಯ ಕೊಲೆ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಆದಿವಾಸಿ ಇಲ್ಲವೇ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ.

ಈ ಅಂಶವು ಕರ್ನಾಟಕ ದಲಿತ ಮಹಿಳಾ ವೇದಿಕೆ ಸಿದ್ಧಪಡಿಸಿರುವ 2014ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲೆ ದೌರ್ಜನ್ಯ ಪ್ರಕರಣಗಳ ವರದಿಯಲ್ಲಿ ಪ್ರಸ್ತಾಪವಾಗಿದೆ. ರಾಜ್ಯದಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 1989ರ ಅನುಷ್ಠಾನದ ಹಿನ್ನೆಲೆಯಲ್ಲಿ ನಡೆಸಿದ ಸತ್ಯ ಶೋಧನೆಯಲ್ಲಿ ಈ ಗಂಭೀರ ವಿಚಾರಗಳು  ದಾಖಲಾಗಿವೆ. ಇದರ ಸಮಗ್ರ ವರದಿಯನ್ನು ಅಕ್ಟೋಬರ್ 14 ರಂದು ಎಸ್‍ವಿಎಂಸಿ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು  ಕರ್ನಾಟಕ ದಲಿತ ಮಹಿಳಾ ವೇದಿಕೆಯ ಅಧ್ಯಕ್ಷೆ ಪಿ. ಯಶೋಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16 ಜಿಲ್ಲೆಗಳಲ್ಲಿ ದೌರ್ಜನ್ಯ ಹೆಚ್ಚುತ್ತಿದೆ ಎಂಬ ಅಂಶವನ್ನು ಸರ್ಕಾರವೇ ಘೋಷಿಸಿದ್ದರೂ ಆ ಜಿಲ್ಲೆಗಳಲ್ಲಿ ಇದುವರೆಗೆ ವಿಶೇಷ ನ್ಯಾಯಾಲಯ ಗಳನ್ನು ಸ್ಥಾಪಿಸಿಲ್ಲ. ಸದ್ಯ 8 ಜಿಲ್ಲೆಗಳಲ್ಲಿ ಮಾತ್ರ ವಿಶೇಷ ನ್ಯಾಯಾಲಯಗಳಿವೆ. ಪ್ರತಿ ಜಿಲ್ಲಾಮಟ್ಟದಲ್ಲೂ ದಲಿತರ ಮೇಲೆ ದೌರ್ಜನ್ಯ ನಡೆದಾಗ ನ್ಯಾಯಾಲಯದಲ್ಲಿ ವಾದಿಸಲು ನೇಮಕವಾಗಿರುವ ವಿಶೇಷ ಅಭಿಯೋಜಕರು ಸರಿಯಾಗಿ ಕೆಲಸ ಮಾಡದೆ ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥವಾಗುತ್ತಿವೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ರಾಜಿ ಅನ್ವಯಿಸುವುದಿಲ್ಲ. ಆದ್ದರಿಂದ ವಿಶೇಷ ಅಭಿಯೋಜಕರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಪರಿಹಾರ ಧನದಡಿಯಲ್ಲಿ 153 ಮಹಿಳೆಯರು 2014ರಲ್ಲಿ ಪರಿಹಾರ ಪಡೆದುಕೊಂಡಿದ್ದಾರೆ. ಇದರಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ಅತ್ಯಾಚಾರ, 68 ಕೊಲೆಗೆ ಯತ್ನ, 402 ತೀವ್ರ ಗಾಯಗಳನ್ನು ಮಾಡಿದ ಅಪರಾಧಗಳು ನಡೆದಿದೆ. ರಾಯಚೂರಿನಲ್ಲಿ ಅತಿ ಹೆಚ್ಚು ಅತ್ಯಾಚಾರಗಳು, ತೀವ್ರ ಗಾಯದ ಪ್ರಕರಣಗಳು ದಾವಣಗೆರೆಯಲ್ಲಿ ವರದಿಯಾಗಿವೆ. ಒಟ್ಟಾರೆ ಎಸ್ಸಿ, ಎಸ್ಟಿ ಮೇಲೆ ಶೇ. 6 ರಷ್ಟು ಅಪರಾಧಗಳು ಹೆಚ್ಚಾಗಿವೆ. ರಾಷ್ಟ್ರೀಯ ಅಪರಾಧ ಕಚೇರಿಯ ಅಂಕಿ ಅಂಶಗಳ ಪ್ರಕಾರ ದೌರ್ಜನ್ಯ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ ಆರನೇ ಸ್ಥಾನದ ಲ್ಲಿದೆ. ಈ ಕೇಸುಗಳಿಗೆ ಶಿಕ್ಷೆಯಾದ ಪ್ರಮಾಣ ಮಾತ್ರ ಕಡಿಮೆ ಇದೆ. ಕಳೆದ ನಾಲ್ಕು ವರ್ಷಗಳಿಂದ ಒಂದು ಕೇಸೂ ಶಿಕ್ಷೆ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!