ಬೆಂಗಳೂರು: ಉತ್ತರ ಬೆಂಗಳೂರಿನ ಬಿ ಇ ಎಲ್ ವೃತ್ತದ ಬಳಿ ಉಂಟಾಗುವ ವಾಹನ ದಟ್ಟಣೆಯಿಂದ ತನ್ನ ವ್ಯಾಸಂಗಕ್ಕೆ ಅಡಚಣೆಯಾಗುತ್ತಿದೆ ಎಂದು ೩ನೆ ತರಗತಿಯ ಬೆಂಗಳೂರಿನ ಬಾಲಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾನೆ.
ಯಶವಂತಪುರದ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ವಿದ್ಯಾರಣ್ಯಪುರದಲ್ಲಿರುವ ದೊಡ್ಡಬೊಮ್ಮನಸಂದ್ರದ ತನ್ನ ಮನೆಗೆ ೩ ಕಿಮೀ ಕ್ರಮಿಸಲು ೪೫ ನಿಮಿಷ ಹಿಡಿಯುತ್ತಿದೆ ಎಂದು ಬಾಲಕ ಪತ್ರದಲ್ಲಿ ತಿಳಿಸಿದ್ದಾನೆ.
ಹೊರ ವೃತ್ತ ರಸ್ತೆಯ ಗೊರಗುಂಟೆಪಾಳ್ಯದ ಜಂಕ್ಷನ್ ಬಳಿ ರೈಲ್ವೇ ಕ್ರಾಸಿಂಗ್ ಗೆ ಮೇಲುಸೇತುವೆ ಕಟ್ತುತ್ತಿರುವುದೇ ಇದಕ್ಕೆ ಕಾರಣ ಎಂದು ಬಾಲಕ ತಿಳಿಸಿದ್ದು ಪ್ರಧಾನ ಮಂತ್ರಿ ಕಾರ್ಯಾಲಯ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ರೈಲ್ವೇ ಇಲಾಖೆಗೆ ತಿಳಿಸಿದೆಯಂತೆ.
ಈ ಯೋಜನೆಯಿಂದಾಗಿ ಜನರ ಆರೋಗ್ಯವಷ್ಟೇ ಅಲ್ಲದೆ ನನ್ನ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಬಾಲಕ ಪತ್ರದಲ್ಲಿ ವಿವರಿಸಿದ್ದಾನೆ.