ಪ್ರಧಾನ ಸುದ್ದಿ

ಮೋದಿ ಸರ್ಕಾರ, ಆರ್‌ಎಸ್‌ಎಸ್‌ನ್ನು ತರಾಟೆಗೆ ತೆಗೆದುಕೊಂಡ ವಿಜ್ಞಾನಿ ಭಾರ್ಗವ

Lingaraj Badiger

ಬೆಂಗಳೂರು: 'ವಿಚಾರವಾದಿಗಳ ಮೇಲಿನ ದಾಳಿ'ಯನ್ನು ಖಂಡಿಸಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸಲು ಮುಂದಾಗಿರುವ ಖ್ಯಾತ ವಿಜ್ಞಾನಿ ಪಿ.ಎಂ.ಭಾಗರ್ವ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿ ಸರ್ಕಾರ ಹಾಗೂ ಆರ್‌ಎಸ್‌ಎಸ್ ನಾವು ಏನು ತಿನ್ನಬೇಕು ಮತ್ತು ಏನು ಮಾಡಬೇಕು ಎಂದು ಆಜ್ಞೆ ಮಾಡುವ ಯತ್ನ ಮಾಡುತ್ತಿದೆ ಎಂದು ವಿಜ್ಞಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಪ್ರಜಾಪ್ರಭುತ್ವವನ್ನು ಕಿತ್ತುಹಾಕಿ ಧಾರ್ಮಿಕ ಸರ್ವಾಧಿಕಾರತ್ವ ಸ್ಥಾಪಿಸುವುದು ನಮಗೆ ಬೇಕಾಗಿಲ್ಲ' ಎಂದು ಭಾರ್ಗವ ಅವರು ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ 'ಸೆಲ್ಯುಲಾರ್ ಮತ್ತು ಮಾಲೆಕ್ಯುಲಾರ್ ಬಯಾಲಜಿ ಕೇಂದ್ರ'ದ ಸಂಸ್ಥಾಪಕ ಹಾಗೂ ನಿರ್ದೇಶಕ ಭಾರ್ಗವ ಅವರು, ಧಾರ್ಮಿಕ ನಂಬಿಕೆಗಳು ಮತ್ತು ವ್ಯಯಕ್ತಿಕ ಆಯ್ಕೆಗಳು ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದಿದ್ದಾರೆ.

SCROLL FOR NEXT