ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಪ್ರಧಾನಿಯಂತೆ ವರ್ತಿಸಲಿಲ್ಲ: ಸಚಿವ ಪಾಟೀಲ

ಮಹದಾಯಿ ವಿಚಾರವೂ ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಅವರು ದೆಹಲಿಗೆ ನಿಯೋಗ ಕರೆದೊಯಾ್ದಗ ನರೇಂದ್ರ ಮೋದಿ ಅವರು ಪ್ರಧಾನಿಯಂತೆ ವರ್ತಿಸದೇ..

ಸಚಿವ ಎಂಬಿ ಪಾಟೀಲ್ (ಸಂಗ್ರಹ ಚಿತ್ರ)
Srinivasa Murthy VN
Updated On : 4 Sept 2015, 9:59 am

ವಿಜಯಪುರ: ಮಹದಾಯಿ ವಿಚಾರವೂ ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಅವರು ದೆಹಲಿಗೆ ನಿಯೋಗ ಕರೆದೊಯಾ್ದಗ ನರೇಂದ್ರ ಮೋದಿ  ಅವರು ಪ್ರಧಾನಿಯಂತೆ ವರ್ತಿಸದೇ ಪಕ್ಷದ ಅಧ್ಯಕ್ಷರಂತೆ ವರ್ತಿಸಿದರು ಎಂದು ಜಲ ಸಂಪನ್ಮೂಲ ಸಚಿವ ಡಾ. ಎಂ.ಬಿ. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.

ಬರ ನಿರ್ವಹಣೆಗಾಗಿ ಕೇಂದ್ರ ದಿಂದ ರು. 3050 ಕೋಟಿ ನೆರವು ಕೇಳಲಾಗಿದೆ. 14 ಜಿಲ್ಲೆಗಳ ದ್ರಾಕ್ಷಿ, ದಾಳಿಂಬೆ ಬೆಳೆಗಾರರ ರು.1300 ಕೋಟಿ ಸಾಲ, ಬಡ್ಡಿ ಮನ್ನಾ, ಕಬ್ಬು ಹಾಗೂ ರೇಷ್ಮೆ ಬೆಳೆಗಾರರ  ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ. ಆದರೆ, ಈ ವೇಳೆ ಪ್ರಧಾನಿ ಮೋದಿ ಅವರು ಪಕ್ಷದ ಅಧ್ಯಕ್ಷ ರೀತಿ ವರ್ತಿಸಿದರು. ರಾಜ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement