ಮನೋಹರ್ ಪರಿಕ್ಕರ್ 
ಪ್ರಧಾನ ಸುದ್ದಿ

ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಕಷ್ಟ: ಮನೋಹರ್ ಪರಿಕ್ಕರ್

ನಿವೃತ್ತ ಸೈನಿಕರಿಗೆ ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಮಾಡುವುದು ಕಷ್ಟ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಪಣಜಿ: ನಿವೃತ್ತ ಸೈನಿಕರಿಗೆ ಒಆರ್ ಒಪಿ ವಾರ್ಷಿಕ ಪರಿಷ್ಕರಣೆ ಮಾಡುವುದು ಕಷ್ಟ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಪಣಜಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಪರಿಕ್ಕರ್, ಒಆರ್ ಒಪಿ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೇ ಇರುವುದನ್ನು ಟೀಕಿಸಿದ್ದ ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಭರವಸೆಗಳನ್ನು ಈಡೆರಿಸಲು ತತ್ವಗಳಿಗಿಂತ ಹಣ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ನಿವೃತ್ತ ಸೈನಿಕರ ಪ್ರಮುಖ 6 ಬೇಡಿಕೆಗಳ ಪೈಕಿ ಒಆರ್ ಒಪಿಯನ್ನು ವಾರ್ಷಿಕವಾಗಿ ಪರಿಷ್ಕರಿಸುವುದೂ ಒಂದು ಬೇಡಿಕೆಯಾಗಿತ್ತು.  ಕೇಂದ್ರ ಸರ್ಕಾರ ಒಆರ್ ಒಪಿಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಒಆರ್ ಒಪಿಯನ್ನು ಪರಿಷ್ಕರಿಸಲು ಬದ್ಧರಾಗಿದ್ದೇವೆ, ಆದರೆ ವಾರ್ಷಿಕವಾಗಿ ಪರಿಷ್ಕರಿಸುವುದು ಕಷ್ಟ ಎಂದು ಹೇಳಿದ್ದಾರೆ.
ಒಆರ್ ಒಪಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸದೇ ಇರುವುದನ್ನು ಟೀಕಿಸಿದ್ದ ರಾಹುಲ್ ಗಾಂಧಿ ಹಾಗೂ  ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಬಗ್ಗೆ ಮಾತನಾಡಿರುವ ಪರಿಕ್ಕರ್ ಈ ಹಿಂದಿನ ಯುಪಿಎ ಸರ್ಕಾರ ಒಆರ್ ಒಪಿ ಜಾರಿಗೆ ಕೇವಲ 500 ಕೋಟಿ ರೂಪಾಯಿ ಮೀಸಲಿಟ್ಟಿತ್ತು, ಭರವಸೆ ಈಡೇರಿಕೆ ವಿಷಯದಲ್ಲಿ ತತ್ವಗಳಿಗಿಂತ ಹಣ ಮುಖ್ಯವಾಗುತ್ತದೆ ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.    
ಹಲವು ದಶಕಗಳಿಂದ ಈಡೇರದೇ ಇದ್ದ ಒಆರ್ ಒಪಿಯನ್ನು ಜಾರಿಗೊಳಿಸಿದ್ದಕ್ಕೆ ಗೋವಾ ಬಿಜೆಪಿ ಘಟಕದಿಂದ ಮನೋಹರ್ ಪರಿಕ್ಕರ್ ಅವರನ್ನು ಸನ್ಮಾನ ಮಾಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ