ಪ್ರಧಾನ ಸುದ್ದಿ

ನಮ್ಮ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಟೆಕ್ಕಿಗಳನ್ನು ಹೊಂದಿರುವ ನಗರ

Lingaraj Badiger

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಇಂಜಿನಿಯರಿಂಗ್ ಪದವೀಧರರನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2011ರ ಸಮೀಕ್ಷೆಯ ಪ್ರಕಾರ, ಮುಂಬೈ ಹಾಗೂ ದೆಹಲಿಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಪದವೀಧರರು ವಾಸವಾಗಿದ್ದಾರೆ. ಈ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ಕರ್ನಾಟಕ ಮಾಸ್ಟರ್ ಎನಿಸಿಕೊಂಡಿದೆ.

ಬೆಂಗಳೂರಿನಲ್ಲಿರುವ ಉದ್ಯೋಗವಕಾಶಗಳು ಭಾರತದಾದ್ಯಂತ ಇರುವ ಇಂಜಿನಿಯರ್‌ಗಳನ್ನು ಹಾಗೂ ತಾಂತ್ರಿಕ ಅಭ್ಯರ್ಥಿಗಳನ್ನು ಆಕರ್ಷಿಸುತ್ತಿದ್ದು, ಇತ್ತೀಚಿಗೆ ಬಿಡುಗಡೆ ಮಾಡಿದ ಶೈಕ್ಷಣಿಕ ಸಮೀಕ್ಷೆಗಳ ಪ್ರಕಾರ, ದೇಶಾದ್ಯಂದ ಇರುವ ಒಟ್ಟು 73.12 ಲಕ್ಷ ಇಂಜಿನಿಯರಿಂಗ್ ಪದವಿಧರರ ಪೈಕಿ ಶೇ.6ರಷ್ಟು(4.66 ಲಕ್ಷ) ಟೆಕ್ಕಿಗಳು ಬೆಂಗಳೂರಿನಲ್ಲೇ ಇದ್ದಾರೆ.

ಮುಂಬೈ ಮಹಾನಗರದಲ್ಲಿ 3.37 ಲಕ್ಷ ಹಾಗೂ ದೆಹಲಿಯಲ್ಲಿ 2.43 ಲಕ್ಷ, ಚೆನ್ನೈಯಲ್ಲಿ 2.03 ಲಕ್ಷ, ಹೈದರಾಬಾದ್‌ನಲ್ಲಿ 1.15 ಲಕ್ಷ ಮತ್ತು ಕೊಲ್ಕತಾದಲ್ಲಿ 0.57 ಲಕ್ಷ ಇಂಜಿನಿಯರ್‌ಗಳಿದ್ದಾರೆ.

SCROLL FOR NEXT