ಪ್ರಧಾನ ಸುದ್ದಿ

"ದುರಂತೋ" ರೈಲು ದುರಂತ: ಪರಿಹಾರ ಘೋಷಣೆ, ತುರ್ತು ಸಹಾಯವಾಣಿ ಆರಂಭ

Srinivasamurthy VN

ಕಲಬುರ್ಗಿ: ಶುಕ್ರವಾರ ತಡರಾತ್ರಿ ಕರ್ನಾಟಕದಲ್ಲಿ ದುರಂತಕ್ಕೀಡಾದ ದುರಂತೋ ಎಕ್ಸ್ ಪ್ರೆಸ್ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ಪರಿಹಾರ ಘೋಷಣೆ ಮಾಡಿದೆ.

ದುರಂತದ ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ರೈಲ್ವೇ ಬೋರ್ಡ್ ನ ಎಕೆ ಮಿತ್ತಲ್ ಅವರಿಗೆ ಕರೆ ಮಾಡಿ ವಿವರ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಇನ್ನು ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ತಲಾ ಎರಡು ಲಕ್ಷ ರುಪಾಯಿ ಮತ್ತು ಗಂಭೀರ ಗಾಯಾಳುಗಳಿಗೆ ತಲಾ 50 ಸಾವಿರ, ಸಾಮಾನ್ಯ ಗಾಯಾಳುಗಳಿಗೆ 25 ಸಾವಿರ ರು. ನೀಡುವುದಾಗಿ ರೈಲ್ವೈ ಇಲಾಖೆ ಘೋಷಣೆ ಮಾಡಿದೆ.

ತುರ್ತು ಸಹಾಯವಾಣಿ ಸಹಾಯವಾಣಿ ಆರಂಭ
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ಕುಟುಂಬಕ್ಕೆ ಮಾಹಿತಿ ನೀಡಲು ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿಗಳನ್ನು ಆರಂಭಿಸಿದ್ದು, 6 ಪ್ರದೇಶಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿದೆ.

ರೈಲ್ವೇ ಇಲಾಖೆಯ ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ.
ಗುಲ್ಬರ್ಗಾ-0847-2255066, 0847-2255067
ಸಿಕಂದರಾಬಾದ್-040-27700968
ಸೋಲಾಪುರ-0217-2313331
ಛತ್ರಪತಿ ಶಿವಾಜಿ ಟರ್ಮಿನಲ್-022-22694040
ಲೋಕಮಾನ್ಯ ತಿಲಕ್ ಟರ್ಮಿನಲ್-022-25280005
ಕಲ್ಯಾಣ್-0251-2311499

SCROLL FOR NEXT