ಎಎಪಿ ಶಾಸಕ ಸೋಮನಾಥ ಭಾರತಿ 
ಪ್ರಧಾನ ಸುದ್ದಿ

ಎಎಪಿ ಶಾಸಕ ಸೋಮನಾಥ ಭಾರತಿಗೆ ಕೋರ್ಟ್ ನಿಂದ ಎರಡು ದಿನಗಳ ರಕ್ಷಣೆ

ಕೌಟುಂಬಿಕ ದೌರ್ಜನ್ಯ ಮತ್ತು ತಮ್ಮ ಪತ್ನಿಯ ಕೊಲೆ ಆರೋಪ ಎದುರುಸುತ್ತಿರುವ ಎಎಪಿ ಶಾಸಕ ಸೋಮನಾಥ ಭಾರತಿ ಅವರಿಗೆ ಬಂಧನದಿಂದ ಎರಡು ದಿನಗಳ ಮುಕ್ತಿ ದೊರೆತಿದೆ.

ನವದೆಹಲಿ: ಕೌಟುಂಬಿಕ ದೌರ್ಜನ್ಯ ಮತ್ತು ತಮ್ಮ ಪತ್ನಿಯ ಕೊಲೆ ಆರೋಪ ಎದುರುಸುತ್ತಿರುವ ಎಎಪಿ ಶಾಸಕ ಸೋಮನಾಥ ಭಾರತಿ ಅವರಿಗೆ ಬಂಧನದಿಂದ ಎರಡು ದಿನಗಳ ಮುಕ್ತಿ ದೊರೆತಿದೆ. ಗುರುವಾರದವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ಆದೇಶ ನೀಡಿದೆ.

ಮಧ್ಯಂತರ ಆದೇಶ ನೀಡಿದ ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ಸೆಪ್ಟಂಬರ್ ೧೭ ರಂದು ವಿಚಾರಣೆಯ ಪ್ರಗತಿಯ ವರದಿ ನೀಡುವಂತೆ ಹೇಳಿದೆ. ಅಂದು ಮತ್ತೆ ವಿಚಾರಣೆ ನಡೆಯಲಿದೆ. ದೆಹಲಿಯ ಮಾಜಿ ಕಾನೂನು ಮಂತ್ರಿಗೆ ಮಧ್ಯಂತರ ರಕ್ಷಣೆ ನೀಡದಂತೆ ದೆಹಲಿ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ "ನಾನು ದಾಖಲೆಗಳನ್ನು ಪರಿಗಣಿಸಬೇಕಿದೆ, ಆದುದರಿಂದ ಈ ವಿಷವಾಗಿ ಅಫಿಡವಿಟ್ ಸಲ್ಲಿಸಿ" ಎಂದಿದ್ದಾರೆ.

"ನಿಮಗೆ ಪ್ರತುಕ್ರಿಯೆ ಸಲ್ಲಿಸಲು ಇಷ್ಟವಿಲ್ಲದಿದ್ದರೆ ಹೇಳಿ, ಇಂದೆ ವಿಚಾರಣೆ ನಡೆಸಿ ತೀರ್ಪು ನೀಡುತ್ತಾನೆ" ಎಂದು ನ್ಯಾಯಾಲಯ ಹೇಳಿದ್ದು ನಂತರ "ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ದೆಹಲಿ ಪೊಲೀಸರು ವರದಿ ಸಲ್ಲಿಸಲಿದ್ದಾರೆ. ಆಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳುವುದು ಬೇಡ" ಎಂದಿದ್ದಾರೆ.

ನೆನ್ನೆ ಟ್ರಯಲ್ ನ್ಯಾಯಾಲಯ ಎಎಪಿ ಶಾಸಕನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ಹಿನ್ನಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT