ಲೋಕಾ ಲಂಚ ಪ್ರಕರಣ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಲೋಕಾ ಲಂಚ: ಅಧಿಕಾರಿಗಳಿಗೆ ಬೆದರಿಕೆ ಕರೆ..!

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣದ ಸಂಬಂಧ ತನಿಖೆ ನಡೆಸಿದ ವಿಶೇಷ ತನಿಖಾ ದಳ (ಎಸ್‍ಐಟಿ) ಬುಧವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹಲವು ಕುತೂಹಲಕಾರಿ ಅಂಶಗಳು ಬಯಲಿಗೆ ಬಂದಿವೆ....

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣದ ಸಂಬಂಧ ತನಿಖೆ ನಡೆಸಿದ ವಿಶೇಷ ತನಿಖಾ ದಳ (ಎಸ್‍ಐಟಿ) ಬುಧವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ  ಆರೋಪ ಪಟ್ಟಿಯಲ್ಲಿ ಹಲವು ಕುತೂಹಲಕಾರಿ ಅಂಶಗಳು ಬಯಲಿಗೆ ಬಂದಿವೆ.

ಹಣಕ್ಕಾಗಿ ಬೆದರಿಸಲು ವಿವಿಧ ಇಲಾಖೆಗಳ ಎಂಜಿನಿಯರುಗಳಿಗೆ ಕರೆ ಮಾಡುತ್ತಿದ್ದದ್ದು ಬೆಳಕಿಗೆ ಬಂದಿವೆ. ಈ ಸಂಬಂಧ ಎಂಜಿನಿಯರುಗಳು, ಐಎಎಸ್, ಐಪಿಎಸ್ ಅಧಿಕಾರಿಗಳು, ಲೋಕಾಯುಕ್ತ  ಕಚೇರಿ ಸಿಬ್ಬಂದಿಯ ಮೌಖಿಕ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಸೈಯ್ಯದ್ ರಿಯಾಜ್ ಮಾಧ್ಯಮಗಳ ಮೂಲಕ ಪ್ರಕರಣದಲ್ಲಿ ಸೋನಿಯಾ ನಾರಂಗ್ ಭಾಗಿಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರಕ್ಕೆ ಯತ್ನಿಸಿದ್ದ ಅಂಶವೂ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ರಿಯಾಜ್ ತಮ್ಮ ಪಿಎ ಮೂಲಕ ವರದಿಗಾರರಿಗೆ ಕರೆ ಮಾಡಿ ಸೋನಿಯಾ ನಾರಂಗ್ ಬಗ್ಗೆ ಮಾಹಿತಿ ನೀಡಬೇಕು ಎಂದು  ಹೇಳಿದ್ದರು.

ಚಾರ್ಜ್‍ಶೀಟ್‍ನಲ್ಲಿರುವ ಪ್ರಮುಖ ಸಾಕ್ಷಿಗಳು
-ಲೋಕಾಯುಕ್ತ ಕಚೇರಿಯಿಂದ ವಶಪಡಿಸಿಕೊಳ್ಳಲಾದ ಸಿಸಿ ಕ್ಯಾಮೆರಾ ಹಾಗೂ ಡಿವಿಆರ್
- ಆರೋಪಿಗಳಾದ ವಿ.ಭಾಸ್ಕರ್, ಅಶೋಕ್ ಕುಮಾರ್ ಹೈದ್ರಾಬಾದ್‍ಗೆ ವಿಮಾನದಲ್ಲಿ ತೆರಳಿ ಅಲ್ಲಿನ ಅವಾಸಾ ಹೋಟೆಲ್‍ನಲ್ಲಿ ಅಶ್ವಿನ್‍ರಾವ್ ಅವರನ್ನು ಭೇಟಿಯಾಗಿರುವ ಬಗ್ಗೆ ದಾಖಲೆ.
-ರೇಸ್ ವ್ಯೂವ್ ಹೋಟೆಲ್‍ನಲ್ಲಿ ಅಶೋಕ್ ಕುಮಾರ್ ಹೋಟೆಲ್ ಮಾಡಿರುವುದು.
- ಅಶೋಕ್ ಕುಮಾರ್, ರಿಯಾಜ್ ಜತೆ ಲೋಕಾಯುಕ್ತ ಕಚೇರಿ ಸಿಬ್ಬಂದಿ ಪ್ರಮೋದ್ ಮೊಬೈಲ್‍ನಲ್ಲಿ ಸಂಭಾಷಣೆ ದಾಖಲೆಗಳು.
- ಶ್ರೀನಿವಾಸಗೌಡ ಆರ್‍ಟಿಐ ಅಡಿ ಪಂಚಾಯತ್ ರಾಜ್ ಇಲಾಖೆಯಿಂದ ಪಡೆದ ದಾಖಲೆಗಳು.
- ಲೋಕಾ ಕಚೇರಿಯಿಂದ ಎಂಜಿನಿಯರ್ ಕೃಷ್ಣ ಮೂರ್ತಿ ಮೊಬೈಲ್‍ಗೆ ಕರೆ ದಾಖಲೆಗಳು.
- ನ್ಯಾ.ವೈ.ಭಾಸ್ಕರ್‍ರಾವ್ ಅವರು ಆರೋಪಿ ವಿ. ಭಾಸ್ಕರ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಬಗೆಗಿನ ದಾಖಲೆಗಳು.
- ಬೆದರಿಕೆ, ತಮ್ಮ ನಡುವಿನ ಸಂಭಾಷಣೆಗಾಗಿ ಬಳಸಿದ 13 ಸಿಮ್ ಕಾರ್ಡ್ ಕಾಲ್ ಡಿಟೇಲ್ಸ್.
- ಡೀಲ್‍ಗಳಿಗಾಗಿ ಈ ನಿವಾರಣ ಟ್ರಸ್ಟ್ ಗೆ ಸಂಬಂಧಿಸಿದ ದಾಖಲೆಗಳು
- ಅಶ್ವಿನ್‍ರಾವ್ ತನ್ನ ಕಾರನ್ನು ಅನಧಿಕೃತವಾಗಿ ರೇನ್‍ಬೋ ವಿಸ್ಟಾ ಅಪಾರ್ಟ್‍ಮೆಂಟ್‍ನಲ್ಲಿ ನಿಲ್ಲಿಸಲು ಮಾಡಿದ್ದ ಸಂಚು
- ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಹಾಗೂ ಡಿವೈಎಸ್ಪಿ ಪ್ರಸನ್ನರಾಜು ಅವರು ದೂರುದಾರ ಎಂಜಿನಿಯರ್ ಕೃಷ್ಣಮೂರ್ತಿ ಅವರಿಂದ ಪಡೆದ ದೂರು ಹಾಗೂ ಹೇಳಿಕೆ ಪ್ರತಿ
- ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗೆ ಹಣಕ್ಕಾಗಿ ಬೆದರಿಕೆ ಮಾಹಿತಿ.
- ಭೂ ದಾಖಲೆಗಳ ತಿದ್ದುಪಡಿಗಾಗಿ ಬಿಡಿಎ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಕರೆಗಳ ಮಾಹಿತಿ
- ಅಶ್ವಿನ್‍ರಾವ್‍ಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಅಕೌಂಟ್‍ಗಳು
- ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಅವರ ಹೇಳಿಕೆ
- ಎಂಜಿನಿಯರ್‍ಗಳು, ಐಎಎಸ್, ಐಪಿಎಸ್ ಲೋಕಾಯುಕ್ತ ಕಚೇರಿ ಸಿಬ್ಬಂದಿ ಸೇರಿ 71 ಅಧಿಕಾರಿ, ಸಿಬ್ಬಂದಿಯ ಮೌಖಿಕ ಹೇಳಿಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT