ಕೊಲ್ಕತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ (75) ಭಾನುವಾರ ಇಹಲೋಕ ತ್ಯಜಿಸಿದರು.
ಕ್ರಿಕೆಟ್ ಆಡಳಿತದಲ್ಲಿ ಅಪಾರ ಅನುಭವಿ ಎನಿಸಿಕೊಂಡಿದ್ದ ದಾಲ್ಮಿಯಾ ಐಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರವಷ್ಟೇ ಹೃದಯಾಘಾತ ದಿಂದಾಗಿ ಕೋಲ್ಕತಾದ ಆಸ್ಪತ್ರೆಗೆ ದಾಖಲಾಗಿದ್ದರು.
ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದರು. ದಾಲ್ಮಿಯಾ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.