ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಆಹ್ವಾನವನ್ನು ತಿರಸ್ಕರಿಸಿರುವ ಪ್ರಗತಿಪರ ರೈತ ಮುಖಂಡ ಕಡಿದಾಳ್ ಶ್ಯಾಮಣ್ಣ ಅವರು, ಬೇಕಾದ್ರೆ ವಿಧಾನಸೌಧದಲ್ಲಿ ಕಸ ಗುಡಿಸ್ತೇನೆ. ಆದರೆ ಮೈಸೂರು ದಸರಾ ಮಾತ್ರ ಉದ್ಘಾಟಿಸಲ್ಲ ಎಂದಿದ್ದಾರೆ.
ಮುಂದಿನ ತಿಂಗಳು ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಕಡಿದಾಳ್ ಶ್ಯಾಮಣ್ಣ ಅವರನ್ನು ಆಹ್ವಾನಿಸಿದ್ದರು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶ್ಯಾಮಣ್ಣ, ಯಾವ ಪುರುಷಾರ್ಥಕ್ಕೆ ದಸರಾ ಉದ್ಘಾಟಿಸಬೇಕು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ರೈತರು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಶ್ಯಾಮಣ್ಣ ವಾಗ್ದಾಳಿ ನಡೆಸಿದರು.