ನವದೆಹಲಿ: ರೈಲ್ವೇ ಪ್ಲಾಟ್ ಫಾರಂಗಳಲ್ಲಿ ಅಥವಾ ರೈಲುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೆ ಟೀ ಮಾರುತ್ತಿದ್ದರು ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಒಂದು ಅರ್ಜಿಗೆ ಬಂದ ಪ್ರತಿಕ್ರಿಯೆ ತಿಳಿಸಿದೆ.
ಕಾಂಗ್ರೆಸ್ ಬೆಂಬಲಿಗ ಹಾಗೂ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲಾ ಆರ್ ಟಿ ಐ ಕಾಯ್ದೆಯಡಿ ರೈಲ್ವೇ ಬೋರ್ಡ್ ಗೆ ಅರ್ಜಿ ಸಲ್ಲಿಸಿ, ಮೋದಿ ಅವರು ರೈಲ್ವೇ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಟೀ ಮಾರಲು ಪರವಾನಿಗಿ ನೀಡಿ ಕೊಟ್ಟಿದ್ದ ನೊಂದಣಿ ಸಂಖ್ಯೆ ಮತ್ತು ಗುರುತಿನ ಚೀಟಿಯ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದರು.
ರೈಲ್ವೇ ಸಚಿವಾಲಯದ ಪ್ರತಿಕ್ರಿಯೆಯನ್ನು ತಿಳಿಸಿರುವ ಪೂನಾವಾಲಾ "ರೈಲ್ವೇ ಬೋರ್ಡಿನ ಟಿಜಿ ವಿಭಾಗ ೩ ರ ಪ್ರವಾಸ ಮತ್ತು ಉಪಹಾರ ಡೈರೆಕ್ಟೋರೆಟ್ ಬಳಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿದೆ" ಎಂದಿದ್ದಾರೆ.