ಪ್ರಧಾನ ಸುದ್ದಿ

ಐಐಟಿ ಮದ್ರಾಸ್‌ ನಂ.1 ಇಂಜಿನಿಯರಿಂಗ್‌ ಕಾಲೇಜ್, ಐಐಎಂ ಬೆಂಗಳೂರು ನಂ.1 ಮ್ಯಾನೇಜ್ ಮೆಂಟ್ ಸಂಸ್ಥೆ

Lingaraj Badiger
ನವದೆಹಲಿ: ಐಐಟಿ ಮದ್ರಾಸ್‌ ದೇಶದ ನಂಬರ್‌ ಒನ್‌ ಇಂಜಿನಿಯರಿಂಗ್ ಕಾಲೇಜ್ ಹಾಗೂ ಐಐಎಂ ಬೆಂಗಳೂರು ನಂಬರ್ ಒನ್ ಮ್ಯಾನೇಜ್ ಮೆಂಟ್ ಸಂಸ್ಥೆ ಎಂಬ ಪ್ರತಿಷ್ಠೆ ತಮ್ಮದಾಗಿಸಿಕೊಂಡಿವೆ.
ಮಾನವ ಸಂಪನ್ಮೂಲ ಸಚಿವಾಲಯವು ಇಂದು 2016ರ ಸಾಲಿನ ಬೋಧನ ವಿದ್ಯಾಲಯಗಳ ಕ್ರಮಾಂಕವನ್ನು (ranking) ಪ್ರಕಟಿಸಿದ್ದು, ಇಂಜಿನಿಯರಿಂಗ್‌ ವಿಭಾಗದಲ್ಲಿ ಐಐಟಿ ಮುಂಬೈ ಹಾಗೂ ಐಐಟಿ ಖರಗ್ ಪುರ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ಇನ್ನು ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಐಐಎಂ ಅಹಮ್ಮದಬಾದ್ ಹಾಗೂ ಐಐಎಂ ಕೋಲ್ಕತಾ ಎರಡು, ಮೂರನೇ ಸ್ಥಾನ ಪಡೆದಿವೆ.
2015ರಲ್ಲಿ ಈ ರೀತಿಯ ರಾಷ್ಟ್ರೀಯ ವಿದ್ಯಾಲಯ ಕ್ರಮಾಂಕ ನೀಡಿಕೆಯ ಕ್ರಮವನ್ನು ಆರಂಭಿಸಲಾಗಿತ್ತು. 
ಬೋಧನೆ, ಕಲಿಕೆ ಮತ್ತು ಸಂಶೋಧನೆ, ಸಂಶೋಧನೆ ಮತ್ತು ವೃತ್ತಿಪರ ಕ್ರಮಗಳು, ಪದವಿ ಫ‌ಲಿತಾಂಶಗಳು, ಹೊರ ತಲುಪುವಿಕೆ ಮತ್ತು ಒಳಗೊಳಿಸುವಿಗೆಯೇ ಮೊದಲಾದ ಮಾನದಂಡಗಳನ್ನು ಈ ಕ್ರಮಾಂಕ ನೀಡಿಕೆಗೆ ಮಾನದಂಡವಾಗಿ ಬಳಸಲಾಗಿತ್ತು. ಐಐಟಿ ಮದ್ರಾಸ್‌ ಈ ಮಾನದಂಡಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದೆ.
SCROLL FOR NEXT