ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಂದುವರೆದ ಉದ್ವಿಗ್ನತೆ 
ಪ್ರಧಾನ ಸುದ್ದಿ

ಮುಂದುವರೆದ ಎನ್ ಐ ಟಿ ಜಟಾಪಟಿ; ಕಾಶ್ಮೀರಿಯೇತರ ವಿದ್ಯಾರ್ಥಿಗಳಿಂದ ತರಗತಿಗಳ ಬಹಿಷ್ಕಾರ

ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್ ಐ ಟಿ) ಜಟಾಪಟಿ ಮುಂದುವರೆದಿದ್ದು, ಅನ್ಯ ಕಾಶ್ಮೀರಿಯೇತರ ವಿದ್ಯಾರ್ಥಿಗಳು ಗುರುವಾರ ತರಗತಿಗಳಿಂದ...

ಶ್ರೀನಗರ: ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್ ಐ ಟಿ) ಜಟಾಪಟಿ ಮುಂದುವರೆದಿದ್ದು, ಕಾಶ್ಮೀರಿಯೇತರ ವಿದ್ಯಾರ್ಥಿಗಳು ಗುರುವಾರ ತರಗತಿಗಳಿಂದ ದೂರ ಉಳಿದಿದ್ದಾರೆ.

ಉದ್ವಿಗ್ನತೆ ತಿಳಿಗೊಳಿಸಲು ಹಾಗೂ ಕಾಶ್ಮೀರಿಯೇತರ  ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಲು ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಕೂಡ ಗುರುವಾರ ಕಾಲೇಜಿಗೆ ಆಗಮಿಸಿದ್ದಾರೆ.

ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಕೆ ರಾಜೆಂದ್ರ ಕುಮಾರ್ ಕೂಡ ಕ್ಯಾಂಪಸ್ಸಿಗೆ ಭೇಟಿ ನೀಡಿದ್ದರು.

ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳು ಹಿಂಸೆಯಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯವಾಗಿ ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಸೇವಾ ನಿರತ ಸಾರ್ವಜನಿಕ ಸಿಬ್ಬಂದಿಯ ಕೆಲಸಕ್ಕೆ ತಡೆ ಒಡ್ಡಿದ ಆರೋಪದ ಮೇಲೆ ಎರಡು ಎಫ್ ಐ ಆರ್ ಗಳನ್ನು ನಿಗೀನ್ ಪೋಲಿ ಠಾಣೆಯಲ್ಲಿ ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಸೀಮಾ ಸುರಕ್ಷಾ ಬಲ (ಎಸ್ ಎಸ್ ಬಿ) ಪಡೆಗಳು ಕ್ಯಾಂಪಸ್ಸಿನಲ್ಲಿ ಬೀಡು ಬಿಟ್ಟಿದ್ದು, ದ್ವಾರಗಳಲ್ಲಿ ಪ್ರಾದೇಶಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ತಮ್ಮ ಪೋಷಕರ ಬಳಿ ತೆರಳ ಬಯಸುವ ವಿದ್ಯಾರ್ಥಿಗಳು, ಹೊರ ಹೋಗಬೇಕಿದ್ದಲ್ಲಿ ಪೋಷಕರ ದೂರವಾಣಿ ಸಂಖ್ಯೆ ನೀಡಿ ಪರವಾನಗಿ ಪಡೆಯಬೇಕೆಂಬ ಆದೇಶವನ್ನು ಎನ್ ಐ ಟಿ ಆಡಳಿತ ಮಂಡಳಿ ಹೊರಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT