ನವದೆಹಲಿ: ನೆನ್ನೆ ನಿಧನರಾದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ಪತ್ನಿ ಕಮಲಾ ಅಡ್ವಾಣಿ ಅವರಿಗೆ ಗೌರವ ಸಲ್ಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಅಡ್ವಾಣಿ ಅವರ ಗೃಹಕ್ಕೆ ಭೇಟಿ ನೀಡಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಗುರುವಾರ ಅಡ್ವಾಣಿ ಅವರ ಮನೆಗೆ ಭೇಟಿ ನೀಡಿದ್ದಾರೆ.
ಹೃದಯಾಘಾತದಿಂದ ಕಮಲಾ ಅಡ್ವಾಣಿ ಅವರು ಬುಧವಾರ ನಿಧರಾಗಿದ್ದರು. ಅವರಿಗೆ ೮೩ ವರ್ಷವಾಗಿತ್ತು.
ಕಮಲಾ ಅಡ್ವಾಣಿ ಅವರು, ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಶಕ್ತಿಯುತ ಆಧಾರ ಸ್ಥಂಭವಾಗಿದ್ದರು ಮತ್ತು ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಣ್ಣಿಸಿದ್ದರು.
ಅಡ್ವಾಣಿ, ಕಮಲಾ ಅವರನ್ನು ೧೯೬೫ರಲ್ಲಿ ಮದುವೆಯಾಗಿದ್ದರು. ಪತಿ ಮತ್ತು ಇಬ್ಬರು ಮಕ್ಕಳಾದ ಜಯಂತ್ ಮತ್ತು ಪ್ರತಿಭಾ ಅವರನ್ನು ಕಮಲಾ ತೊರೆದಿದ್ದಾರೆ. ಕಳೆದ ವರ್ಷವಷ್ಟೇ ಈ ದಂಪತಿ ತಮ್ಮ ೫೦ ನೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಕೊಂಡಿತ್ತು.