ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಕೊಲ್ಲಂ ಪಟಾಕಿ ದುರಂತ: 50 ಕೆಜಿ ಪಟಾಕಿ ವಶಕ್ಕೆ ಪಡೆದ ಪೊಲೀಸರು

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದ ಹಿನ್ನಲೆಯಲ್ಲಿ ದೇವಾಲಯದ ಬಳಿ ಇದ್ದ ಮತ್ತೊಂದು...

ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದ ಹಿನ್ನಲೆಯಲ್ಲಿ ದೇವಾಲಯದ ಬಳಿ ಇದ್ದ ಮತ್ತೊಂದು ಪಟಾಕಿ ಘಟಕದ ಮೇಲೆ ದಾಳಿ ಮಾಡಿದ ಅಂಚುತೆಂಗು ಪೊಲೀಸರು 50 ಕೆಜಿ ಪಟಾಕಿಯನ್ನು ಜಪ್ತಿ ಪಡೆದಿದ್ದಾರೆ. 
ಜಾತ್ರೆ ವೇಳೆ ಪುತ್ತಿಂಗಲ್ ದೇವಾಲಯದ ಬಳಿ ಪಟಾಕಿ ಸಿಡಿಸಿದ ಗುತ್ತಿಗೆದಾರನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ ಪೊಲೀಸರು 50 ಕೆಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ.
ಪಟಾಕಿ ಘಟಕದ ಮಾಲಿಕ ವರ್ಕಲಾ ಕೃಷ್ಣಮೂರ್ತಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ನಿ ಅನಾರ್ಕಲಿ ಹೆಸರಲ್ಲಿ ಪರವಾನಗಿ ಪಡೆದಿದ್ದ. ತಯಾರಕ ಘಟಕ ಗೋಡನ್ ನಲ್ಲಿ ಪಟಾಕಿಗಳನ್ನು ಇಡಲಾಗಿತ್ತು. ಅಕ್ರಮವಾಗಿ ಸ್ಫೋಟಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂಬು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ನಿನ್ನೆ ಮಧ್ನಾಹ್ನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ್ದಾರೆ. 
15 ಕೆಜಿ ಪಟಾಕಿಗಳನ್ನು ತಯಾರಿಸಲು ಸರ್ಕಾರ ಅನುಮತಿ ನೀಡಿರುತ್ತದೆ. ಆದರೆ, ಇವರು ಕಾನೂನು ಉಲ್ಲಂಘಿಸಿ ಹೆಚ್ಚಿನ ಮಟ್ಟದಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
ಈ ಮುಂಚೆ ಮತ್ತೊಬ್ಬ ಗುತ್ತಿಗೆದಾರನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ್ದ ಪೊಲೀಸರು 1,000 ಕೆಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!