ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

'ಸಂಜ್ಞಾ ಭಾಷೆ'ಯನ್ನು ಅಧಿಕೃತ ಭಾಷೆಯಾಗಿಸಲು ಇನ್ಫೋಸಿಸ್, ಕೋಕಾ-ಕೋಲಾ ಮನವಿ

'ಸಂಜ್ಞಾ ಭಾಷೆ'ಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಮನವಿ ಸಲ್ಲಿಸಿರುವ ಅರ್ಜಿಗೆ ಇನ್ಫೋಸಿಸ್ ಸಹಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು

ನವದೆಹಲಿ: 'ಸಂಜ್ಞಾ ಭಾಷೆ'ಯನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಮನವಿ ಸಲ್ಲಿಸಿರುವ ಅರ್ಜಿಗೆ ಇನ್ಫೋಸಿಸ್ ಸಹಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಕೋಕಾ-ಕೋಲಾ ಭಾರತದ ಅಧ್ಯಕ್ಷ ವೆಂಕಟೇಶ್ ಕಿಣಿ ಸಹಿ ಹಾಕಿದ್ದಾರೆ.

ಈ ಇಬ್ಬರು ಅರ್ಜಿದಾರರು 'ಸನ್ನೆ ಭಾಷೆಯನ್ನೂ' ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನ ಮಂತ್ರಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವರಿಗೆ ಆಗ್ರಹಿಸಿದ್ದಾರೆ.

'ಸಂಜ್ಞಾ ಭಾಷೆ' ಭಾರತದ ಅಧಿಕೃತ ಭಾಷೆಯಾದರೆ ಮಾತ್ರ ಪ್ರಧಾನ ಮಂತ್ರಿಯವರ 'ಎಲ್ಲರಿಗೂ ದಕ್ಕುವ ಭಾರತ'ದ ಕನಸು ನನಸಾಗುವುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

"ಇದು ಲಕ್ಷಾಂತರ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರಲಿದೆ ಮತ್ತು ನಮ್ಮ ಸಮಾಜ ಹೆಚ್ಚು ಒಳಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ" ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ.

ಲಿಮ್ಕಾ ಬಲ ಆಫ್ ಅವಾರ್ಡ್ಸ್ ಭಾರತದಲ್ಲಿ ಆಯೋಜಿಸಿದ್ದ 'ವರ್ಷದ ವಿಶೇಷ ವ್ಯಕ್ತಿಗಳು' ಕಾರ್ಯಕ್ರಮದಲ್ಲಿ ಮಾತನಾಡಿದ ಮೂರ್ತಿ "ಎಲ್ಲ ಲಿಂಗಗಳ, ವಿವಿಧ ಸಾಮರ್ಥ್ಯವುಳ್ಳ, ವಿವಿಧ ಜನಾಂಗದ ಮತ್ತಿತರ ಸಾಮಾಜಿಕ ಆಯಾಮಗಳ ವ್ಯಕ್ತಿಗಳನ್ನು ಒಳಗೊಳ್ಳದ ಹೊರತು ಭಾರತ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮುವುದನ್ನು ಕಲ್ಪಿಸಿಕೊಳ್ಳಲು ಕಷ್ಟ" ಎಂದಿದ್ದಾರೆ.

ಇದೇ ಸಮಯದಲ್ಲಿ ವಿವಿಧ ಸಾಧನೆಗೈದ ೧೨ ವಿಶೇಷ ಸಾಮರ್ಥ್ಯದ ವ್ಯಕ್ತಿಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಸಲ್ಲಿಸಿದ್ದು, ಬ್ರೈಲ್ ಲಿಪಿಯ ಕಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕವನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

"ಇದು ದೃಷ್ಟಿ ದೋಷವುಳ್ಳವರಿಗೆ ಸದ್ಯದ ದಾಖಲೆಗಳನ್ನು ತಿಳಿದು ಹೊಸ ದಾಖಲೆಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ" ಎಂದಿದ್ದಾರೆ ವೆಂಕಟೇಶ್ ಕಿಣಿ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel