ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ 
ಪ್ರಧಾನ ಸುದ್ದಿ

ಪ್ರತಿಭಟನೆಗಳ ಬೆದರಿಕೆಯ ನಡುವೆಯೂ ವಾರಣಾಸಿ ಗುಲಾಂ ಅಲಿ ಕಾರ್ಯಕ್ರಮಕ್ಕೆ ಸಿದ್ಧತೆ

ಹಿಂದುತ್ವವಾದಿ ಸಂಘಟನೆಗಳಿಂದ ವಾರಣಾಸಿಯಲ್ಲಿ ನಿಗದಿಯಾಗಿರುವ ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಅವರ ಕಚೇರಿಗೆ ಅಡ್ಡಿಪಡಿಸುವ ಆತಂಕವಿದ್ದರೂ, ನಿಗದಿಯಂತೆ

ಲಕನೌ: ಹಿಂದುತ್ವವಾದಿ ಸಂಘಟನೆಗಳಿಂದ ವಾರಣಾಸಿಯಲ್ಲಿ ನಿಗದಿಯಾಗಿರುವ ಪಾಕಿಸ್ತಾನಿ ಘಜಲ್ ಗಾಯಕ ಗುಲಾಂ ಅಲಿ ಅವರ ಕಚೇರಿಗೆ ಅಡ್ಡಿಪಡಿಸುವ ಆತಂಕವಿದ್ದರೂ, ನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಶನಿವಾರ ಹೇಳಿದ್ದಾರೆ.

ಏಪ್ರಿಲ್ ೨೬ ರಂದು ಹನುಮಾನ್ ದೇವಾಲಯದಲ್ಲಿ ಘಜಲ್ ಗಾಯಕ ಪ್ರದರ್ಶನ ನೀಡಲಿದ್ದಾರೆ.

ದೇವಾಲಯದ ಅರ್ಚಕ ವಿಶಂಬರ್ ನಾಥ್ ಮಿಶ್ರಾ ಅವರೊಂದಿಗೆ ಮಾತನಾಡಿರುವ ಗುಲಾಂ ಅಲಿ "ಭಜರಂಗ ಬಲಿ ಆಶೀರ್ವದಿಸಿ, ಅವನ ಪಾದದಡಿಯಲ್ಲಿ ಮತ್ತೆ ಹಾಡಲು ಕರೆದಿರುವುದಕ್ಕೆ ಧನ್ಯ" ಎಂದಿದ್ದಾರೆ.

ಕಳೆದ ಬಾರಿ ಸಂಕಟ್ ಮೊಚನ್ ದೇವಾಲಯದಲ್ಲಿ ಹಾಡಿದಾಗ ಒದಗಿದ ಆತ್ಮ ಶಾಂತಿಯನ್ನು ಯಾವುದೂ ಸರಿಗಟ್ಟಲು ಸಾಧ್ಯವಿಲ್ಲ ಎಂದು ಕೂಡ ಅವರು ಅರ್ಚಕರಿಗೆ ತಿಳಿಸಿದ್ದಾರೆ.

ಸಣ್ಣತನದ ಮನಸ್ಸಿಗಿಂತಲೂ ವಾರಣಾಸಿಯ ಸಂಸ್ಕೃತಿ ಬಲು ದೊಡ್ಡದು ಎಂದಿರುವ ಸಂಘಟಕರು ಪ್ರದರ್ಶನ ನಿಗದಿಯಂತೆ ನಡೆಯಲಿದೆ ಎಂದಿದ್ದಾರೆ.

ಹಿಂದು ಯುವ ವಾಹಿನಿ ಮತ್ತು ಶಿವ ಸೇನಾ ದಂತಹ ಕೆಲವು ಹಿಂದು ಸಂಘಟನೆಗಳು ಈ ಸಂಗೀತ ಕಾರ್ಯಕ್ರಮಕ್ಕೆ ಅಡ್ಡಿಯೊಡ್ಡುವ ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನ ಗಾಯಕನ ಕಾರ್ಯಕ್ರಮವನ್ನು ವಿರೋಧಿಸಿ ಶಿವಸೇನೆಯ ಮುಖಂಡ ಅಜಯ್ ಚೌಬೆ ಭಿತ್ತಿಚಿತ್ರಗಳನ್ನು ಮತ್ತು ಬಿಲ್ಲೆಗಳನ್ನು ಹಂಚಿದ್ದಾರೆ. ಆದರೆ ಈ ವಿರೋಧಕ್ಕೆ ನಗರದಲ್ಲಿ ಬೆಂಬಲ ಕಂಡುಬಂದಿಲ್ಲ.

"ಈ ನಗರ ವಿಶಾಲ ಹೃದಯಿಗಳಿಗೆ ಸೇರಿದ್ದು, ಅಂತಹ ಸಣ್ಣ ಮನಸ್ಸಿನವರನ್ನು ಉದಾಸೀನ ಮಾಡುವುದೇ ಲೇಸು" ಎಂದು ಸಂಘಟಕರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT