ಸಾಹಿತಿ ಪುಂಡಲೀಕ ಹಾಲಂಬಿ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ವಿಧಿವಶರಾಗಿದ್ದು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಾಲಂಬಿ ಅವರು ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ...

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ವಿಧಿವಶರಾಗಿದ್ದು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಾಲಂಬಿ ಅವರು ಬೆಂಗಳೂರಿನ ಶೇಖರ್  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಪುಂಡಲೀಕ ಹಾಲಂಬಿ ಅವರನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಬಸವನ ಗುಡಿಯಲ್ಲಿರುವ ಶೇಖರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು  ಚಿಕಿತ್ಸೆ ಫಲಕಾರಿಯಾಗದೇ ಹಾಲಂಬಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ 24ನೇ ಅಧ್ಯಕ್ಷರಾಗಿದ್ದ ಹಾಲಂಬಿ ಅವರು ಇತ್ತೀಚೆಗಷ್ಟೇ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿದ್ದರು. ಸಾಹಿತ್ಯ ಪರಿಷತ್ತಿನ ಚುನಾವಣೆ ಬಳಿಕ ತಮ್ಮ ಅನಾರೋಗ್ಯದಿಂದಾಗಿ ಪರಿಷತ್ತಿನ ಕಾರ್ಯಗಳಿಂದ ದೂರವುಳಿದಿದ್ದ ಹಾಲಂಬಿ ಅವರನ್ನು ಇತ್ತೀಚೆಗಷ್ಟೇ ಬಸವನಗುಡಿಯಲ್ಲಿರುವ ಶೇಖರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಹಾಲಂಬಿ ಅವರು ವಿಧಿವಶರಾಗಿದ್ದಾರೆ.

ಹಾಲಂಬಿ ಅವರ ಪಾರ್ಥೀವ ಶರೀರವನ್ನು ಅವರ ಜಯನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಅಲ್ಲಿಯೇ ಹಾಲಂಬಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು ಬಳಿಕ ಭಾನುವಾರ ಮಧ್ಯಾಹ್ನ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲು ನಿರ್ಧರಿಸಲಾಗಿದೆ.

ಅಂತಿಮ ವಿಧಿವಿಧಾನದ ಕುರಿತು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೂರು ಪದಕ; ಬರಾನಿಕಾ ಎಲಂಗೋವನ್‌ ಐತಿಹಾಸಿಕ ಸಾಧನೆ

ಆಪರೇಷನ್ ಸಿಂಧೂರ್ ಎಫೆಕ್ಟ್: ಬ್ರಹ್ಮೋಸ್ ಕ್ಷಿಪಣಿ ಅಂದಾಕ್ಷಣ ಪಾಕಿಸ್ತಾನ ನಡುಗುತ್ತದೆ; ಗೃಹ ಸಚಿವ ಅಮಿತ್ ಶಾ

ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...

CM ಡಿಕೆ ಶಿವಕುಮಾರ್ ವ್ಯಕ್ತಿತ್ವ ವಜ್ರಕ್ಕಿಂತ ಕಠಿಣ, ಆದ್ರೆ ಹೃದಯ ಮೃದು: ನೂಣನವಿನಕೆರೆ ಶ್ರೀ ಅಚ್ಚರಿ ಹೇಳಿಕೆ