ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ 
ಪ್ರಧಾನ ಸುದ್ದಿ

1984 ಸಿಖ್ ವಿರೋಧಿ ಗಲಭೆ: ತನಿಖೆ ಮುಗಿಸಲು ಸಿಬಿಐಗೆ ೨ ತಿಂಗಳ ಹೆಚ್ಚುವರಿ ಅವಕಾಶ

೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಪ್ರಕರಣದಲ್ಲಿ ತನಿಖೆ ಸಂಪೂರ್ಣಗೊಳಿಸಲು ಸಿಬಿಐಗೆ ಕೋರ್ಟ್ ಬುಧವಾರ

ನವದೆಹಲಿ: ೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಪ್ರಕರಣದಲ್ಲಿ ತನಿಖೆ ಸಂಪೂರ್ಣಗೊಳಿಸಲು ಸಿಬಿಐಗೆ ಕೋರ್ಟ್ ಬುಧವಾರ ಎರಡು ತಿಂಗಳ ಹೆಚ್ಚುವರಿ ಅವಕಾಶ ನೀಡಿದೆ.

ಕೆನಡಾದ ಹೈ ಕಮಿಷನ್ ನಿಂದ ಮಾಹಿತಿ ಪಡೆಯಲು ಇಂಟರ್ ಪೋಲ್ ಗೆ ಮನವಿ ಸಲ್ಲಿಸಿದ್ದೇವೆ ಎಂದು ಸಿಬಿಐ ಕೋರ್ಟ್ ಗೆ ತಿಳಿಸಿದ ನಂತರ, ಅಲ್ಲಿಗೆ ಲಿಖಿತ ಅರ್ಜಿಯ ಮನವಿ ಸಲ್ಲಿಸುವಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮೆಜೆಸ್ಟ್ರೆಟ್ ಶಿವಾಲಿ ಶರ್ಮಾ ತಿಳಿಸಿದ್ದಾರೆ.

ಜುಲೈ ೧೧ ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

ಶಸ್ತ್ರಾಸ್ತ್ರ ಮಾರಾಟಗಾರ ಅಭಿಷೇಕ್ ವರ್ಮಾ ನೀಡಿದ್ದ ಹೇಳಿಕೆಯಂತೆ ಟೈಟ್ಲರ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ನೋಡಿದ್ದರು ಎಂಬುದನ್ನು ಗಮನಿಸಿ ಡಿಸೆಂಬರ್ ೪ ೨೦೧೫ ರಂದು ಗಲಭೆಯಲ್ಲಿ ಟೈಟ್ಲರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಸಿಬಿಐಗೆ ಕೋರ್ಟ್ ಆದೇಶಿಸಿತ್ತು.

ವರ್ಮಾ ಅವರ ಹೇಳಿಕೆ ಸತ್ಯವೋ ಅಲ್ಲವೋ ಎಂಬುದನ್ನು ಕೂಡ ತನಿಖೆ ಮಾಡಲು ಕೋರ್ಟ್ ತಿಳಿಸಿತ್ತು.

ಸಾಕ್ಷ್ಯದಾರರೊಬ್ಬರಿಗೆ ಹಣದ ಆಮಿಷ ಒಡ್ಡಿ ಮತ್ತು ಅವರ ಮಗನನ್ನು ವಿದೇಶಕ್ಕೆ ಕಳುಹಿಸಿಕೊಡುವ ಭರವಸೆ ನೀಡಿ ಟೈಟ್ಲರ್ ಪ್ರಭಾವ ಬೀರಿದ್ದರು ಎಂದು ವರ್ಮಾ ಸಿಬಿಐಗೆ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT