ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಜಂಗ್-ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಆಡಳಿತ ವ್ಯವಹಾರಗಳಿಗೆ ಲೆಫ್ಟಿನೆಂಟ್ ಗವರ್ನರ್ ಅವರೇ ಅಧ್ಯಕ್ಷ ಎಂದು ದೆಹಲಿ ಹೈಕೋರ್ಟ್ ಇಂದು ನೀಡಿರುವ ಆದೇಶ 'ಜನ ವಿರೋಧಿ' ಎಂದಿದೆ ಆಮ್ ಆದ್ಮಿ ಪಕ್ಷ.
"ಭಾರತದ ಪ್ರಜಾಪ್ರಭುತ್ವವನ್ನು ಹೈಕೋರ್ಟ್ ಆದೇಶ ಅಪಹಾಸ್ಯ ಮಾಡಿದೆ" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಆಶಿಶ್ ಕೇತನ್ ಟ್ವೀಟ್ ಮಾಡಿದ್ದು "ಇದು ಜನ ವಿರೋಧಿ ತೀರ್ಪು" ಎಂದಿದ್ದಾರೆ.
"ಲೋಕಸಭೆಯಲ್ಲಿ 282 ಸ್ಥಾನಗಳನ್ನು ಗೆದ್ದ ಮೇಲೆ ಕೇಂದ್ರ ಸರ್ಕಾರದ ಮೇಲೆ ರಾಷ್ಟ್ರಪತಿಯವರ (ಪ್ರಣಬ್ ಮುಖರ್ಜಿ) ಅಧಿಕಾರವನ್ನು ನರೇಂದ್ರ ಮೋದಿ ಒಪ್ಪಿಕೊಳ್ಳಲಿದ್ದಾರೆಯೇ" ಎಂದು ಕೇತನ್ ಪ್ರಶ್ನಿಸಿದ್ದಾರೆ. ಹೀಗೆ ಹೇಳುವ ಮೂಲಕ ಎಎಪಿ ಬಹುಮತದಿಂದ ದೆಹಲಿ ಚುನಾವಣೆಯನ್ನು ಗೆದ್ದಿದೆ ಎಂದಿದ್ದಾರೆ.
ಈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಆಪ್ ಆದ್ಮಿ ಪಕ್ಷ ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.