ಪ್ರಧಾನ ಸುದ್ದಿ

ವೆನಿಜುವೆಲಾ ಅಲಿಪ್ತ ಚಳುವಳಿ ಶೃಂಗಸಭೆಗೆ ಪ್ರಧಾನಿ ಮೋದಿ ಗೈರು ಸಾಧ್ಯತೆ

Srinivas Rao BV

ನವದೆಹಲಿ: ಮುಂದಿನ ತಿಂಗಳಿನಲ್ಲಿ ವೆನೆಜುವೆಲಾದಲ್ಲಿ  ನಡೆಯಲಿರುವ ಅಲಿಪ್ತ ಚಳುವಳಿ (ಎನ್​ಎಎಂ-ನಾಮ್) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗುವ ಸಾಧ್ಯತೆ ಇದೆ.

ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಲಭಿಸಿ  ಹಲವು ವಾರಗಳೇ ಕಳೆದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಭಾಗವಹಿಸುವುದರ ಬಗ್ಗೆ ಕೇಂದ್ರ ಸರ್ಕಾರ ಈ ವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.  ವೆನೆಜುವೆಲಾ ವಿದೇಶಾಂಗ ಸಚಿವರ ಡೆಲ್ಸಿ ರೋಡ್ರಿಗಸ್ ಅವರು ಇನ್ನೊಂದು ಆಹ್ವಾನ ನೀಡುವ ಸಲುವಾಗಿ ಗುರುವಾರ ಭಾರತಕ್ಕೆ ಬರುತ್ತಿದ್ದಾರೆ. ವೆನೆಜುವೆಲಾದ ತೈಲ ಸಚಿವರೂ ಅವರ ಜೊತೆಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಆದರೆ ಪ್ರಧಾನಿನರೇಂದ್ರ ಮೋದಿ ಅಮೆರಿಕವನ್ನು ದೃಷ್ಟಿಯಲ್ಲಿಟ್ಟುಕೊಂಡು,  ವೆನೆಜುವೆಲಾದಲ್ಲಿ  ನಡೆಯಲಿರುವ ಅಲಿಪ್ತ ಚಳುವಳಿ (ಎನ್​ಎಎಂ-ನಾಮ್) ಶೃಂಗಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲಿಪ್ತ ಚಳವಳಿ 1961ರಲ್ಲಿ ಬೆಲ್ಗ್ರೇಡ್​ನಲ್ಲಿ ಆರಂಭವಾಗಿತ್ತು. ವಿಶ್ವದ ಪ್ರಮುಖ ಶಕ್ತಿಗಳಾಗಿದ್ದ ಅಮೆರಿಕ ಮತ್ತು ಹಿಂದಿನ ಯುಎಸ್​ಎಸ್​ಆರ್ ಜೊತೆ ಸೇರದ ಇತರ ರಾಷ್ಟ್ರಗಳು ಅಲಿಪ್ತ ಚಳವಳಿ ಹೆಸರಿನಲ್ಲಿ ಒಂದಾಗಿದ್ದವು. 1979 ರಲ್ಲಿ ಭಾರತದ ಪ್ರಧಾನಿಯಾಗಿದ್ದ ಚರಣ್ ಸಿಂಗ್ ಅಲಿಪ್ತ ಚಳುವಳಿ(ಎನ್​ಎಎಂ-ನಾಮ್) ಶೃಂಗಸಭೆಗೆ ಗೈರಾದ ಮೊದಲ ಭಾರತದ ಪ್ರಧಾನಿಯಾಗಿದ್ದರು. ಇದಾದ ಬಳಿಕ ಶೃಂಗಸಭೆಯನ್ನು ಗೈರಾಗುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರಾಗಲಿದ್ದಾರೆ.

SCROLL FOR NEXT