ರಾಹುಲ್ ಗಾಂಧಿ ಮತ್ತು ಆರ್ ಎಸ್ ಎಸ್ ಮಾನಹಾನಿ ಜಟಾಪಟಿ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಹಾತ್ಮ ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಒಂದು ಸಂಸ್ಥೆಯಾಗಿ ಕಾರಣ ಎಂದು ಹೇಳಿಲ್ಲ ಆದರೆ ಜನ ಆ ಸಂಭಂದವನ್ನು ಸೃಷ್ಟಿಸಿದರು ಎಂದು ಬುಧವಾರ ಸುಪ್ರೀಂ ಕೋರ್ಟ್ ಗೆ ಹೇಳಲಾಗಿದೆ.
ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಆರ್ ಎಫ್ ನಾರಿಮನ್ ಅವರಗಳನ್ನು ಒಳಗೊಂಡ ನ್ಯಾಯಪೀಠಕ್ಕೆ ಹಿರಿಯ ವಕೀಲ ಕಪಿಲ್ ಸಿಬಲ್ ಹೀಗೆ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರಾಹುಲ್ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು.
ಹೈಕೋರ್ಟ್ ನಲ್ಲಿ ರಾಹುಲ್ ನೀಡಿರುವ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡ ವಿಭಾಗೀಯ ಪೀಠ, ಕಾಂಗ್ರೆಸ್ ಮುಖಂಡ ತಾನು ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಸಂಘಟನೆಯನ್ನು ದೂಷಿಸಲಿಲ್ಲ ಬದಲಾಗಿ ಜನ ಆ ಸಂಬಂಧವನ್ನು ಬೆಸೆದರು ಎಂಬ ಸ್ಪಷ್ಟ ಹೇಳಿಕೆ ನೀಡಿದರಷ್ಟೇ ಈ ಪ್ರಕರಣವನ್ನು ಇಲ್ಲಿಗೆ ಮುಗಿಸಲು ಸಾಧ್ಯ ಎಂದು ಹೇಳಿದೆ.
ಆದರೂ ಆರ್ ಎಸ್ ಎಸ್ ಪ್ರತಿನಿಧಿಸುವ ವಕೀಲ ಉಮೇಶ್ ಲಲಿತ್ ಅವರು ತಮ್ಮ ಕಕ್ಷಿದಾರರ ಸೂಚನೆ ಪಡೆಯಲು ಸಮಯ ಕೋರಿದ್ದರಿಂದ ಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದೆ.