ಪ್ರಧಾನ ಸುದ್ದಿ

ಬಲೂಚಿಸ್ತಾನದಲ್ಲಿ ಭಾರತದ ಧ್ವಜ, ಪ್ರಧಾನಿ ಮೋದಿ ಫೋಟೋ ಹಿಡಿದು ಪ್ರತಿಭಟನೆ

Lingaraj Badiger
ಬಲೂಚಿಸ್ತಾನ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬಲೂಚಿಸ್ಥಾನದ ಹೋರಾಟದ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಬೆಂಬಲಿಸಿ ಬುಧವಾರ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಸ್ವಾತಂತ್ರ್ಯ್ಕಾಗಿ ಧ್ವನಿಯೆತ್ತಿರುವ ಬಲೂಚಿಸ್ತಾನದ ಹಲವು ಹೋರಾಟಗಾರರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರ ಪ್ರದರ್ಶಿಸಿ, ಭಾರತದ ಧ್ವಜ ಹಿಡಿದು ಪ್ರತಿಭಟಿಸಿರುವ ಸನ್ನಿವೇಶ ಈಗ ಅಂತರ್ಜಾಲಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 
ಇದೇ ವೇಳೆ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪಾಕ್ ರಾಷ್ಟ್ರ ಧ್ವಜವನ್ನು ತುಳಿದು, ಅದನ್ನು ಸುಟ್ಟುಹಾಕಿ ತಮ್ಮ ಆಕ್ರೋಶ ಪ್ರದರ್ಶಿಸಿದ್ದಾರೆ.
ಪ್ರಧಾನಿ ಮೋದಿ ಅವರಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಇದೆ ಎನ್ನುವ ನಿರೀಕ್ಷೆಯಲ್ಲಿರುವ ಬಲೂಚಿಸ್ತಾನಿಗಳು ಈಗ ಪಾಕಿಸ್ತಾನದ ವಿರುದ್ಧ ತೀವ್ರವಾದ ಆಕ್ರೋಶವನ್ನೇ ಪ್ರದರ್ಶಿಸಿದ್ದು, ಸ್ವಾತಂತ್ರ್ಯ ಹೋರಾಟಗಾರ ಅಕ್ಬರ್ ಬುಗ್ತಿ ಅವರ ಭಾವಚಿತ್ರವನ್ನೂ ಮೋದಿ ಭಾವಚಿತ್ರಗಳ ಜತೆಗೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ ಪ್ರತಿಭಟನಾಕಾರರು ಯಾರೂ, ಎಲ್ಲಿಯೂ ತಮ್ಮ ಮುಖಗಳು ಕಾಣಿಸದಂತೆ ಬಟ್ಟೆಯಿಂದ ಮುಚ್ಚಿಕೊಂಡಿದ್ದಾರೆ.
ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ಮೋದಿ ಮಾಡಿದ ಐತಿಹಾಸಿಕ ಭಾಷಣದಲ್ಲಿ, ಬಲೂಚಿಸ್ಥಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ದೇಶ ನಡೆಸಿದ ದೌರ್ಜನ್ಯಗಳನ್ನು ಗಮನಕ್ಕೆ ತಂದಿದ್ದಕ್ಕೆ ಬಲೂಚಿಸ್ಥಾನದ ಜನರಿಗೆ ಅಭಿನಂದನೆಗಳು ಎಂದಿದ್ದರು.
SCROLL FOR NEXT