ಪ್ರಧಾನ ಸುದ್ದಿ

ಹಣಕಾಸು ವರ್ಷ ಬದಲಾವಣೆ ಬಗ್ಗೆ ಸಾರ್ವಜನಿಕರಿಂದ ಸಲಹೆ ಕೇಳಿದ ಕೇಂದ್ರ ಸರ್ಕಾರ

Srinivas Rao BV

ನವದೆಹಲಿ: ಹಣಕಾಸು ವರ್ಷವನ್ನು ಬದಲಾವಣೆ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಸಾರ್ವಜನಿಕರಿಂದ ಸಲಹೆ ಕೇಳಿದೆ. ಪ್ರಸ್ತುತ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಿ ಅದರ ಮಾರ್ಚ್ 31 ಕ್ಕೆ ಅಂತ್ಯಗೊಳ್ಳಲಿದೆ.

ಆದರೆ ಪ್ರಸ್ತುತ ಇರುವ ಹಣಕಾಸು ವರ್ಷವನ್ನು ಜನವರಿ 1 ರಿಂದ ಡಿಸೆಂಬರ್ ಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹಣಕಾಸು ವರ್ಷವನ್ನು ಜನವರಿಂದ 1 ರಿಂದ ಡಿಸೇಂಬರ್  31 ಕ್ಕೆ ವರ್ಗಾಯಿಸುವ ವಿಷಯದಲ್ಲಿ ಸಾರ್ವಜನಿಕರಿಂದಲೇ ಸಲಹೆ-ಸೂಚನೆಗಳನ್ನು ಪಡೆಯಲು ಮುಂದಾಗಿದೆ.

ಹೊಸ ಆರ್ಥಿಕ ವರ್ಷದ ಕುರಿತು ಮೈ ಗೌರ್ನಮೆಂಟ್ ವೆಬ್ ಸೈಟ್ ಮೂಲಕ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಹಣಕಾಸು ವರ್ಷವನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದ್ದು, ಬಜೆಟ್ ಮಂಡನೆ ವೇಳೆ ಮುಂಗಾರು ಪ್ರಮಾಣ ಸೇರಿದಂತೆ ಹಲವು ಅಂಶಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.  ಹೊಸ ಆರ್ಥಿಕ ವರ್ಷವನ್ನು ನಿರ್ಧರಿಸುವುದಕ್ಕಾಗಿ ಕೇಂದ್ರ ಸರ್ಕಾರ ಮುಖ್ಯ ಹಣಕಾಸು ಸಲಹೆಗಾರ ಶಂಕರ್ ಆಚಾರ್ಯ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ.

SCROLL FOR NEXT