ದಾಳಿ ವೇಳೆ ಪತ್ತೆಯಾದ ನಗದು ಹಾಗೂ ಚಿನ್ನ 
ಪ್ರಧಾನ ಸುದ್ದಿ

ಕರ್ನಾಟಕದಲ್ಲಿ ಐಟಿ ದಾಳಿ, ಬಾತ್ ರೂಮಿನಲ್ಲಿ ಬಚ್ಚಿಟ್ಟಿದ್ದ 5.7 ಕೋಟಿ ನಗದು, 32 ಕೆಜಿ ಚಿನ್ನ ಜಪ್ತಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕದಲ್ಲೂ ತಮ್ಮ ದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಶನಿವಾರ ಚಿತ್ರದುರ್ಗ ಹಾಗೂ ಹುಬ್ಬಳ್ಳಿ...

ಚಿತ್ರದುರ್ಗ/ಹುಬ್ಬಳ್ಳಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರ್ನಾಟಕದಲ್ಲೂ ತಮ್ಮ ದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಶನಿವಾರ ಚಿತ್ರದುರ್ಗ ಹಾಗೂ ಹುಬ್ಬಳ್ಳಿ ಸ್ಥಳೀಯ ಕ್ರಿಕೆಟ್ ಬೆಟ್ಟಿಂಗ್, ಹವಾಲಾ ಕುಳ ಮತ್ತು ಬಂಗಾರದ ವ್ಯಾಪಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ್ದಾರೆ.
ಇಂದು ಹುಬ್ಬಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಏಕಕಾಲಕ್ಕೆ 15 ಕಡೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು, ಬಾತ್ ರೂಮಿನ ಸೀಕ್ರೆಟ್ ಛೇಂಬರ್ ನಲ್ಲಿಟ್ಟದ 5.7 ಕೋಟಿ ರುಪಾಯಿ ನಗದು ಹಾಗೂ 32 ಕೆಜಿಗೂ ಹೆಚ್ಚು ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಚಿತ್ರದುರ್ಗದ ಚಳ್ಳಕೆರೆಯ ಕ್ಯಾಸಿನೋ ಜೂಜು ಅಡ್ಡೆಯ ಮಾಲೀಕ ಕೆ.ಸಿ. ವೀರೇಂದ್ರಗೆ ಸೇರಿದ ಮೂರು ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳಿಗೆ ಬಾತ್ ರೂಮಿನ ಗೋಡೆಯಲ್ಲಿ ಲಾಕರ್ ನ ಒಳಗೆ ಎರಡು ಸಾವಿರ ರುಪಾಯಿ ಮುಖಬೆಲೆಯ 5.7 ಕೋಟಿ ರು. ಹಾಗೂ 90 ಲಕ್ಷ ರುಪಾಯಿ ಮೌಲ್ಯದ ಹಳೇ ನೋಟ್ ಗಳನ್ನು ಜಪ್ತಿ ಮಾಡಿದ್ದಾರೆ. 
ವೀರೇಂದ್ರ ಬಾತ್ ರೂಮಿನ ಗೋಡೆಯಲ್ಲಿ ಟೈಲ್ಸ್ ಮಾದರಿಯ ಗೋಡೆಯಲ್ಲಿ ಹೊಸ ಟೆಕ್ನಾಲಜಿ ಬಳಸಿ ಹಣವನ್ನು ಬಚ್ಚಿಟ್ಟಿದ್ದರು. ಈ ಹವಾಲಾ ದಂಧೆಯಲ್ಲಿ ಇನ್ನು ಯಾರು ಯಾರು ಇದ್ದಾರೆ ಎಂಬುದು ತನಿಖೆಯಿಂದ ಮಾತ್ರ ಹೊರ ಬರಲಿದೆ.
ಇನ್ನು ಹುಬ್ಬಳ್ಳಿ ನಗರದ ಸಮುಂದರಸಿಂಗ್ ಎಂಬುವವರ ಕಚೇರಿ ಹಾಗೂ ಅಂಗಡಿ ಮತ್ತು ಮನೆ ಮೇಲೆ 20 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು.
ಜವಳಿ ಸಾಲನಲ್ಲಿರುವ ಬಂಗಾರದ ವ್ಯಾಪಾರಿಕ ವಿಷ್ಣು ಆರ್.ಹಬೀಬ ಎಂಬುವವರ ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು,ಸಿಸಿ ಟಿವಿ ಫೂಟೇಜ್ ಕೂಡ ಪರಿಶೀಲಿಸಿದ್ದಾರೆ.
ಕೇಂದ್ರ ಸರ್ಕಾರ ನೋಟ್ ನಿಷೇಧಿಸಿದ ನಂತರ ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಎರಡನೇ ಅತಿ ದೊಡ್ಡ ದಾಳಿ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!