ಪ್ರಧಾನ ಸುದ್ದಿ

ಸುಷ್ಮಾ ಸ್ವರಾಜ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ: ವೈದ್ಯ

Guruprasad Narayana
ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ ಎಂದು ಹಿರಿಯ ವೈದ್ಯ ಮಂಗಳವಾರ ಹೇಳಿದ್ದಾರೆ. 
"ಸಚಿವೆ ವೇಗವಾಗಿ ಗುಣಮುಖರಾಗುತ್ತಿದ್ದು, ಅವರನ್ನು ಆಸ್ಪತ್ರೆಯಿಂದ ಕಳುಹಿಸಲು ಕನಿಷ್ಠ ಒಂದು ವಾರವಾದರೂ ಅಗತ್ಯವಿದೆ. ಅವರ ಸ್ಥಿತಿಯನ್ನು ನಮ್ಮ ವೈದ್ಯ ಸಮೂಹ ಪರಿಶೀಲಿಸುತ್ತಿದೆ" ಎಂದು ಹಿರಿಯ ಜಿಜೆಪಿ ಮುಖಂಡರಿಗೆ ಕಿಡ್ನಿ ಕಸಿ ಮಾಡಿದ ವೈದ್ಯ ತಂಡದ ಹಿರಿಯ ವೈದ್ಯರು ಹೇಳಿದ್ದಾರೆ. 
ಎಐಐಎಂಎಸ್ ನಿರ್ದೇಶಕ ಎಂ ಸಿ ಮಿಶ್ರಾ ಅವರ ನೇತೃತ್ವದಲ್ಲಿ, ಹಿರಿಯ ವೈದ್ಯರಾದ ಎಂ ಮಿನ್ಜ್, ವಿ ಕೆ ಬನ್ಸಲ್ ಮತ್ತು ಪೀಟರ್ ಮೊಹಿಂದರ್ ಸಿಂಗ್ ಅವರನ್ನು ಒಳಗೊಂಡಂತೆ ೫೦ ಜನರ ವೈದ್ಯಕೀಯ ಸಿಬ್ಬಂದಿ ನೆರವಿನಿಂದ ಡಿಸೆಂಬರ್ ೧೦ ರಂದು ಸುಶ್ಮಾ ಸ್ವರಾಜ್ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಅವರ ಸಂಭಂದವಲ್ಲದವರು ಸುಶ್ಮಾ ಅವರಿಗೆ ಕಿಡ್ನಿ ದಾನ ಮಾಡಿದ್ದರು.
ಈ ಮೂರು ಘಂಟೆಗಳ ಶಸ್ತ್ರಚಿಕಿತ್ಸೆಯನ್ನು ಕಾರ್ಡಿಯೋ ಥೋರಾಸಿಕ್ ಮತ್ತು ನ್ಯೂ ಸೈನ್ಸಸ್ ಕೇಂದ್ರದಲ್ಲಿ ನಿರ್ವಹಿಸಲಾಗಿತ್ತು. ಕೆಲವು ತಿಂಗಳುಗಳಿಂದ ಎಐಐಎಂಎಸ್ ಗೆ ಭೇಟಿ ನೀಡುತ್ತಿದ್ದ ೬೪ ವರ್ಷದ ಸಚಿವರನ್ನು ನವೆಂಬರ್ ೭ ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
SCROLL FOR NEXT