ನಜೀಬ್ ಅಹ್ಮದ್ ಶೋಧಕ್ಕೆ ಆಗ್ರಹಿಸಿ ಪ್ರತಿಭಟನೆ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಕಾಣೆಯಾದ ವಿದ್ಯಾರ್ಥಿಗಾಗಿ ಇಡೀ ಜೆ ಎನ್ ಯು ಆವರಣ ಹುಡುಕಿ; ಪೊಲೀಸರಿಗೆ ಹೈಕೋರ್ಟ್ ಸೂಚನೆ

ಕಾಣೆಯಾದ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರನ್ನು ಹುಡುಕಲು ವಿಶ್ವವಿದ್ಯಾಲಯ ಪ್ರತಿ ಮೂಲೆಯನ್ನು ಶೋಧಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಕ್ರೈಮ್ ಘಟಕದ

ನವದೆಹಲಿ: ಕಾಣೆಯಾದ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರನ್ನು ಹುಡುಕಲು ವಿಶ್ವವಿದ್ಯಾಲಯ ಪ್ರತಿ ಮೂಲೆಯನ್ನು ಶೋಧಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಕ್ರೈಮ್ ಘಟಕದ ಪೊಲೀಸರಿಗೆ ಸೂಚಿಸಿದೆ. 
ನ್ಯಾಯಾಧೀಶ ಜಿ ಎಸ್ ಸಿಸ್ತಾನಿ ಮತ್ತು ನ್ಯಾಯಾಧೀಶ ವಿನೋದ್ ಗೋಯಲ್ ಅವರನ್ನು ಒಳಗೊಂಡ ನ್ಯಾಯಪೀಠ, ಅಹ್ಮದ್ ಅವರನ್ನು ಶೋಧಿಸಲು, ಪ್ರತಿ ಕೊಠಡಿ, ಹಾಸ್ಟೆಲ್ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣವನ್ನು ಹುಡುಕಬೇಕೆಂದು ಪೊಲೀಸರಿಗೆ ಸೂಚಿಸಿದೆ.
ಪೊಲೀಸರು ಮತ್ತು ದೆಹಲಿ ಸರ್ಕಾರ ತಮ್ಮ ಮಗನನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಕೋರಿ ನಜೀಬ್ ತಾಯಿ ಫಾತಿಮಾ ನಫೀಸ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತ್ತು. 
ಅಕ್ಟೋಬರ್ ೧೪-೧೫ ರ ರಾತ್ರಿಯಲ್ಲಿ ಆರ್ ಎಸ್ ಎಸ್ ನ ವಿದ್ಯಾರ್ಥಿ ಘಟಕ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ನ ಸದಸ್ಯರೊಂದಿಗೆ ಜಟಾಪಟಿ ನಡೆದ ಮೇಲೆ ಎಂ ಎಸ್ ಸಿ ವಿದ್ಯಾರ್ಥಿ, ೨೭ ವರ್ಷದ ಅಹ್ಮದ್ ಜೆ ಎನ್ ಯು ವಿದ್ಯಾರ್ಥಿನಿಲಯದಿಂದ ಕಾಣೆಯಾಗಿದ್ದರು. 
ಆದರೆ ಈ ಕಾಣೆಯಾದ ಪ್ರಕರಣಕ್ಕೆ ತಮ್ಮ ಪಾತ್ರ ಇಲ್ಲ ಎಂದು ಎಬಿವಿಪಿ ತಿಳಿಸಿತ್ತು. 
ಅಹ್ಮದ್ ಅವರಿಗೆ ಥಳಿಸಿದರು ಎಂದು ಆರೋಪಿಸಲಾದ ನಾಲ್ವರು ವಿದ್ಯಾರ್ಥಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ಇದರಿಂದ ಸುಳಿವು ಸಿಗಬಹುದು ಎಂದು ಪೊಲೀಸರು ಕೋರ್ಟ್ ಗೆ ಹೇಳಿದ್ದಾರೆ. 
ಜೆ ಎನ್ ಯು ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿರುವುದಕ್ಕೆ ನೋವಾಗಿದೆ ಎಂದು ಇದಕ್ಕೂ ಮುಂಚಿತವಾಗಿ ತಿಳಿಸಿದ್ದ ಕೋರ್ಟ್, ಯಾತನೆಗೆ ಒಳಗಾಗಿರುವ ತಾಯಿಗೆ ಅವರ ಮಗನನ್ನು ತಂದೊಪ್ಪಿಸಿ ಎಂದಿತ್ತು. 
ಈಗ ಡಿಸೆಂಬರ್ ೨೨ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT