ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಪಠಾಣ್ ಕೋಟ್ ನಲ್ಲಿ ಶಂಕಿತ ಕಾರು ಪತ್ತೆ; ತೀವ್ರ ಶೋಧ!

ಪಂಜಾಬ್ ನ ಪಠಾಣ್ ಕೋಟ್ ಸೇನಾ ಕ್ಯಾಂಪ್ ಬಳಿ ಶಂಕಿತ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಶಂಕಿತರೆಲ್ಲರೂ ಪರಾರಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ..

ಅಮೃತಸರ: ಪಂಜಾಬ್ ನ ಪಠಾಣ್ ಕೋಟ್ ಸೇನಾ ಕ್ಯಾಂಪ್ ಬಳಿ ಶಂಕಿತ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿದ್ದ ಶಂಕಿತರೆಲ್ಲರೂ ಪರಾರಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭೀಕರ ಉಗ್ರ ದಾಳಿ ಬೆನ್ನಲ್ಲೇ ಮತ್ತದೇ ಪಠಾಣ್ ಕೋಟ್ ಬಳಿಯ ಬಮಿಯಾಲ್ ಪ್ರದೇಶದಲ್ಲಿ ಶಂಕಾಸ್ಪದ ಕಾರೊಂದು ಪತ್ತೆಯಾಗಿರುವುದು ಭೀತಿಗೆ ಕಾರಣವಾಗಿದ್ದು, ನಿನ್ನೆ  ತಡರಾತ್ರಿಯಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಆಲ್ಟೋ ಕಾರನ್ನು ಸ್ಥಳೀಯರೇ ಹಿಡಿದಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರೆಲ್ಲರೂ ಇಳಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಕಾರನ್ನು ವಶಕ್ಕೆ ಪಡೆದಿರುವ ಪಠಾಣ್  ಕೋಟ್ ಪೊಲೀಸರು, ಪರಾರಿಯಾದ ಶಂಕಿತರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕಾರು ಜಮ್ಮು ಮತ್ತು ಕಾಶ್ಮೀರದ ನೋಂದಣಿ ಹೊಂದಿದ್ದು, ಕಾರಿನಲ್ಲಿ ಯಾವುದೇ ರೀತಿ ಸ್ಫೋಟಕಗಳು ಅಥವಾ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಇನ್ನು ಪರಾರಿಯಾದ ಶಂಕಿತರಿಗಾಗಿ ಪೊಲೀಸರು ಬಲೆ ಬೀಸಿದ್ದು, ಸ್ಥಳೀಯರು ನೀಡಿರುವ ಮಾಹಿತಿ ಮೇರೆಗೆ ಶೋಧ ನಡೆಸುತ್ತಿದ್ದಾರೆ.

ಇದೇ ವರ್ಷ ಜನವರಿ ತಿಂಗಳಲ್ಲಿ ಇದೇ ಪಠಾಣ್ ಕೋಟ್ ರೈಲ್ವೇ ನಿಲ್ದಾಣದಲ್ಲಿ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT