ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ
ನವದೆಹಲಿ: ನಿಮ್ಮ ಕಣ್ಗಾವಲಿನಲ್ಲೇ ನಡೆದ ಹಲವು ಹಗರಣಗಳ ಬಗ್ಗೆ ವಿವರಣೆ ಕೊಡಿ ಎಂದು ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರಿಗೆ ಭಾರತೀಯ ಜನತಾ ಪಕ್ಷ ಶನಿವಾರ ಆಗ್ರಹಿಸಿದೆ.
"ಚಿದಂಬರಂ ನೋಟು ಹಿಂಪಡೆತ ಕ್ರಮವನ್ನು ಟೀಕಿಸುತ್ತಿದ್ದರೆ ಮತ್ತು ಪ್ರಧಾನಿ ಮೋದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಿದ್ದರೆ, ೨೦೦೪ ಮತ್ತು ೨೦೧೪ ರ ನಡುವಿನ ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದದ್ದೆಲ್ಲ ರಾಷ್ಟದ ಹಿತಾಸಕ್ತಿಗೆ ಎಂದು ಅವರು ನಂಬಿದ್ದಾರೆಯೇ" ಎಂದು ಬಿಜೆಪಿ ಮುಖಂಡ ನಳಿನ್ ಕೊಹ್ಲಿ ಪ್ರಶ್ನಿಸಿದ್ದಾರೆ.
"ಮೊದಲು, ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ಪಾದನೆಯಾದ ಕಪ್ಪು ಹಣದ ಬಗ್ಗೆ ವಿವರಣೆ ನೀಡಲಿ ಅವರು ಮತ್ತು ಅದರಲ್ಲಿ ಅವರ ಪಾತ್ರವೇನು ಎಂದು ವಿವರಿಸಲಿ. ಆ ವಿವರಣೆ ನೀಡಿದ ನಂತರ ಇತರರಿಂದ ಅವರು ವಿವರಣೆ ನಿರೀಕ್ಷಿಸಬಹುದು" ಎಂದು ಕೂಡ ಕೊಹ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು ಚಿದಂಬರ್ ಅವರು ಮೋದಿ, ನೋಟು ಹಿಂಪಡೆತ ನಿರ್ಧಾರ ತಪ್ಪು ಎಂದು ಒಪಿಕೊಳ್ಳಬೇಕು ಎಂದು ಆಗ್ರಹಿಸಿದ್ದರು "೪೫ ಕೋಟಿ ಜನರನ್ನು ಭಿಕ್ಷುಕರನ್ನಾಗಿಸಿರುವ ಮತ್ತು ೪೫ ದಿನಗಳಿಂದ ಮಧ್ಯಮವರ್ಗವನ್ನು ಹೈರಾಣು ಮಾಡಿರುವ ನೋಟು ಹಿಂಪಡೆತ ನಿರ್ಧಾರ ತಪ್ಪು ಎಂದು ಮೋದಿ ಒಪ್ಪಿಕೊಳ್ಳಲಿ" ಎಂದು ಚಿದಂಬರಂ ಆಗ್ರಹಿಸಿದ್ದರು.