ಪ್ರಧಾನ ಸುದ್ದಿ

ಜಯಲಲಿತಾಗೆ ಭಾರತ ರತ್ನ, ನೊಬೆಲ್ ಮತ್ತು ಮ್ಯಾಗ್ಸಸೆ ಪ್ರಶಸ್ತಿಗಳನ್ನು ದೊರಕಿಸಿಕೊಡಲು ಎಐಡಿಎಂಕೆ ಪಣ

Guruprasad Narayana
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಜನ್ಮದಿನವನ್ನು ರಾಷ್ಟ್ರೀಯ ಕೃಷಿಕರ ದಿನವಾಗಿ ಘೋಷಿಸಿ, ಮರಣೋತ್ತರ ಭಾರತರತ್ನ ನೀಡಬೇಕೆಂದು ಆಡಳಿತ ಪಕ್ಷ ಎಐಡಿಎಂಕೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ. 
ಹಾಗೆಯೇ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕೆ, ಜಯಲಲಿತಾ ಅವರಿಗೆ ನೊಬೆಲ್ ಪ್ರಶಸ್ತಿ ಮತ್ತು ರಾಮೊನ್ ಮ್ಯಾಗ್ಸಸೆ ಪ್ರಶಸ್ತಿ ದೊರಕಿಸಿಕೊಡಲು ಎಲ್ಲ ಪ್ರಯತ್ನ ಮಾಡಲು ಪಕ್ಷ ನಿರ್ಧರಿಸಿದೆ. 
ಈ ನಿರ್ಣಯದ ಪ್ರಕಾರ, ಜಯಲಲಿತಾ ಎಂದಿಗೂ ತಮ್ಮನ್ನು ರೈತ ಎಂದು ಕರೆದುಕೊಂಡಿದ್ದರು ಮತ್ತು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದರು ಎಂದು ತಿಳಿಸಲಾಗಿದೆ. 
ಸದ್ಯಕ್ಕೆ ದಿವಂಗತ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮ ದಿನ ಡಿಸೆಂಬರ್ ೨೩ನ್ನು ರೈತ ದಿನಾಚರಣೆಯಾಗಿ ಆಚರಿಸಲಾಗುತ್ತದೆ. 
SCROLL FOR NEXT