ಉಪಚುನಾವಣೆ ಸೋಲಿಗೆ ಜಾತ್ಯಾತೀತ ಮತಗಳ ವಿಭಜನೆ ಕಾರಣ: ಸಿದ್ದರಾಮಯ್ಯ
ಹೆಬ್ಬಾಳ ಮತ್ತು ದೇವದುರ್ಗದಲ್ಲಿ ಸೋಲು ಕಾಣಲು ಜಾತ್ಯಾತೀತ ಮತಗಳ ವಿಭಜನೆಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ...
ಮೈಸೂರು: ಹೆಬ್ಬಾಳ ಮತ್ತು ದೇವದುರ್ಗದಲ್ಲಿ ಸೋಲು ಕಾಣಲು ಜಾತ್ಯಾತೀತ ಮತಗಳ ವಿಭಜನೆಯೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಇಂದು ಹೆಚ್.ಡಿ.ಕೋಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರ ಚುನಾವಣೆಯಲ್ಲಿ ಪಕ್ಷಗಳು ಒಗ್ಗೂಡಿ ಮತಗಳನ್ನು ಒಂದೆಡೆ ಸೇರಿದ್ದಕ್ಕೆ ಬಿಜೆಪಿ ಸೋಲು ಕಾಣುವಂತಾಗಿತ್ತು. ಆದರೆ, ರಾಜ್ಯದಲ್ಲಿ ಪಕ್ಷಗಳು ಒಂದೆಡೆ ಸೇರುವ ಬಗ್ಗೆ ಗಮನ ಹರಿಸುತ್ತಿಲ್ಲ. ಇದೀಗ ಹೆಬ್ಬಾಳ ಹಾಗೂ ದೇವದುರ್ಗದಲ್ಲಿ ಸೋಲು ಕಾಣಲು ಜಾತ್ಯಾತೀಯ ಮತಗಳ ವಿಭಟನೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಪಚುನಾವಣೆ ಸಂಬಂಧ ಪಕ್ಷದಲ್ಲಿ ಒಳಜಗಳ ಹಾಗೂ ವೈ ಮನಸ್ಸುಗಳಿವೆ ಎಂಬ ಗುಮಾನಿಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದಲ್ಲಿ ಯಾವುದೇ ಒಳಜಗಳಾಗಲಿ, ವೈಮನಸ್ಸುಗಳಾಗಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.