ಮುಖ್ಯಮಂತ್ರಿ ಸಿದ್ದರಾಮಯ್ಯ 
ಪ್ರಧಾನ ಸುದ್ದಿ

ಕುಮಾರಸ್ವಾಮಿಗೆ ಮಾಡೋಕೆ ಕೆಲಸವಿಲ್ಲ: ಸಿಎಂ ಸಿದ್ದರಾಮಯ್ಯ

ನನ್ನ ದುಬಾರಿ ವಾಚ್ ಕುರಿತಂತೆ ಮಾತನಾಡುತ್ತಿರುವ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಡಲು ಕೆಲಸವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ...

ಬೆಂಗಳೂರು; ನನ್ನ ದುಬಾರಿ ವಾಚ್ ಕುರಿತಂತೆ ಮಾತನಾಡುತ್ತಿರುವ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಡಲು ಕೆಲಸವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. 
ಈ ಕುರಿತಂತೆ ಹನೂರು ಪಟ್ಟಣದಲ್ಲಿ ಮಾತನಾಡಿರುವ ಅವರು, ದುಬಾರಿ ವಾಚ್ ಕುರಿತಂತೆ ತಮ್ಮ ಬಳಿ ದಾಖಲೆಗಳಿದೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಲ್ಲ. ಅವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. 
ಹ್ಯೂಬ್ಲೋಟ್ ಕಂಪನಿಯ ಗಡಿಯಾರ ಜಗತ್ತಿನ ದುಬಾರಿ ಕೈಗಡಿಯಾರಗಳಲ್ಲಿ ಒಂದಾಗಿದ್ದು, ಇದು ಸ್ವಿಜರ್ಲೆಂಡ್ ಗೆ ಸೇರಿದ ಕಂಪನಿಯಾಗಿದೆ. ಇದೀಗ ಈ ಗಡಿಯಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಎಂದು ಹೇಳಲಾಗುತ್ತಿದ್ದು, ಗಡಿಯಾರವು 301 ಎಂಪಿ, 1780. ಆರ್ ಎಕ್ಸ್ ಮಾದರಿಯ ಕೈಗಡಿಯಾರದ ಮೇಲ್ಭಾಗದ ವಿನ್ಯಾ 18 ಕ್ಯಾರಟ್ ಬಂಗಾರದ್ದಾಗಿದೆ. ಇನ್ನು ಗಡಿಯಾರದ ಮುಳ್ಳು ಹಾಗೂ ಒಳಾಂಗಣ ವಜ್ರದ ಹರಳುಗಳನ್ನು ಹೊಂದಿದೆ. ಇದರಂತೆ ಗಡಿಯಾರದ ಬೆಲ್ಟ್ ಕೂಡ ವಜ್ರದ ಹರಳುಗಳನ್ನು ಕೂರಿಸಿ ವಿಶೇಷವಾಗಿ ವಿನ್ಯಾಸವನ್ನು ಮಾಡಲಾಗಿದೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ತೊಡುವ ಗಡಿಯಾರದ ಮೌಲ್ಯ ಬರೋಬ್ಬರಿ 21,888 ಅಮೆರಿಕನ್ ಡಾಲರ್ ಗಳು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!