ನವದೆಹಲಿ: ಬ್ಯಾಂಕ್ ಗಳಿಗೆ ಮಾತು ವಿತ್ತೀಯ ಸಂಸ್ಥೆಗಳಿಗೆ ೫೦೦ ಕೋಟಿಗೂ ಹೆಚ್ಚು ಸಾಲ ಹಿಂತಿರುಗಿಸದೆ ವಂಚಿಸಿರುವ ಸಂಸ್ಥೆಗಳ ಪಟ್ಟಿಯನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪಟ್ಟಿಯಲ್ಲಿ, ಕಾರ್ಪೊರೆಟ್ ಸಾಲವನ್ನು ಮರು ರಚಸಿರುವ ಸಂಸ್ಥೆಗಳನ್ನು ಸೇರ್ಪಡಿಸುವಂತೆ ಸೂಚಿಸಿದೆ.
ಮುಖ್ಯ ನ್ಯಾಯಾಧೀಶ ಜಿ ಎಸ್ ಠಾಕೂರ್ ಒಳಗೊಂಡ ನ್ಯಾಯಪೀಠ, ಆರ್ ಬಿ ಐಗೆ ಈ ಆದೇಶ ನೀಡಿದ್ದು ಮುಚ್ಚಿದ ಲಕೋಟೆಯಲ್ಲಿ ವಂಚಕರ ಪಟ್ಟಿ ನೀಡುವಂತೆ ಆದೇಶಿಸಿದೆ.
೨೦೦೩ರಲ್ಲಿ ಕೆಲವು ಅಪನಂಬಿಕಸ್ಥ ಸಂಸ್ಥೆಗಳಿಗೆ ಹುಡ್ಕೋ ಸಾಲ ನೀಡಿರುವುದನ್ನು ಗುರುತಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.