ಸುಪ್ರೀಂ ಕೋರ್ಟ್ 
ಪ್ರಧಾನ ಸುದ್ದಿ

ಗುಪ್ತಚರ ಸಂಸ್ಥೆಗಳನ್ನು ಹೊಣೆ ಮಾಡಲು ಸಾರ್ವಜನಿಕ ಅರ್ಜಿ: ಸುಪ್ರೀಂ ಕೋರ್ಟ್ ವಜಾ

ಬೇಹುಗಾರಿಕಾ ಸಂಸ್ಥೆಗಳಾದ ಐ ಬಿ, ಆರ್ ಎ ಡಬ್ಲ್ಯು ಮತ್ತು ಎನ್ ಟಿ ಆರ್ ಒ ಗಳನ್ನು ಸಂಸತ್ತಿನಲ್ಲಿ ಹೊಣೆಗಾರರನ್ನಾಗಿ ಮಾಡುವುದಕ್ಕೆ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು

ನವದೆಹಲಿ: ಬೇಹುಗಾರಿಕಾ ಸಂಸ್ಥೆಗಳಾದ ಐ ಬಿ, ಆರ್ ಎ ಡಬ್ಲ್ಯು ಮತ್ತು ಎನ್ ಟಿ ಆರ್ ಒ ಗಳನ್ನು ಸಂಸತ್ತಿನಲ್ಲಿ ಹೊಣೆಗಾರರನ್ನಾಗಿ ಮಾಡುವುದಕ್ಕೆ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಈ ನಡೆ ದೇಶದ ಭದ್ರತೆಗೆ ಧಕ್ಕೆ ತರಬಲ್ಲುದು ಎಂದು ಅಭಿಪ್ರಾಯಪಟ್ಟಿದೆ.

"ಈ ಸಾರ್ವಜನಿಕ ಅರ್ಜಿಗೆ ಮಾನ್ಯತೆ ನೀಡುವುದಕ್ಕೆ ನಮಗೆ ಸಾಧ್ಯವಿಲ್ಲ.. ಗುಪ್ತಚರ ಇಲಾಖೆಗಳ ವಿಷಯದಲ್ಲಿ ನಾವು ತಲೆ ಹಾಕಿದರೆ ದೇಶದ ಭದ್ರತೆಗೆ ಧಕ್ಕೆ ಬರಬಲ್ಲುದು" ಎಂದು ಎನ್ ಜಿ ಒ ಒಂದು ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಒಳಗೊಂಡ ವಿಭಾಗೀಯ ಪೀಠ ಹೇಳಿದೆ.

ಈ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿ ಇವುಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಎನ್ ಜಿ ಒ ಒಂದು ಪಿ ಐ ಎಲ್ ಸಲ್ಲಿಸಿತ್ತು.

ಎನ್ ಜಿ ಒ ಪರವಾಗಿ ವಾದ ಮಾಡಿದ್ದ ಖ್ಯಾತ ವಕೀಲ ಪ್ರಶಾಂತ್ ಭೂಷಣ್, ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಕಾನೂನಿನಡಿಯಲ್ಲಿ ಈ ಬೇಹುಗಾರಿಕೆಯ ಸಂಸ್ಥೆಗಳಿಗೆ ಹೊಣೆಯಿಲ್ಲ ಆದುದರಿಂದ ಜನರಿಗೆ ಅಥಾ ಸಂಸತ್ತಿಗೆ ಅವರು ಬದ್ಧರಾಗಿರುವಂತೆ ಮಾಡುವುದು ಸೂಕ್ತ ಎಂದು ವಾದ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT