ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಪ್ರಶಂಸಿದ್ದಾರೆ.
ಕೇಂದ್ರೆ ಬಜೆಟ್ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಜೇಟ್ಲಿ ಅವರು ಬಹಳ ದೂರದೃಷ್ಟಿಯಿಂದ ಬಜೆಟ್'ನ್ನು ಮಂಡಿಸಿದ್ದಾರೆ. ಇದೊಂದು ಜನಪರ ಬಡೆಟ್ ಆಗಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ. ದೇಶದ ರೈತರಿಗೆ, ಕೆಳವರ್ಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. 2019ರ ವೇಳೆಗೆ ದೇಶದ ಎಲ್ಲಾ ಗ್ರಾಮಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸಲಾಗುತ್ತದೆ. ನೀರಾವರಿ ಕ್ಷೇತ್ರದ ಅಭಿವೃದ್ಧಿಗೂ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, ಪ್ರತಿ ಕೃಷಿ ಭೂಮಿಗೂ ನೀರಾವರಿ ಸೌಲಭ್ಯ ಸಿಗುವಂತೆ ಕ್ರಮಕೈಗೊಳ್ಳಲಾಗಿದೆ. ಸ್ವಂತ ಮನೆ ಕಟ್ಟುವವರಿಗೆ ಬಜೆಟ್ ನಿಂದ ಅನುಕೂಲಕರವಾಗುತ್ತದೆ. ಅಲ್ಲದೆ, ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೈಗೊಂಡಿದ್ದು, ಒಂದು ರೀತಿಯಲ್ಲಿ ಹೇಳಬೇಕಾದರೆ ಈ ಬಜೆಟ್ ಬಡವರ ಅಭಿವೃದ್ಧಿಯ ಬ್ಲ್ಯೂಪ್ರಿಂಟ್ ಆಗಿದೆ ಎಂದು ಹೇಳಿದ್ದಾರೆ.