ಮುಂಬೈ: ಅಸಹಿಷ್ಣುತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಇನ್ಕ್ರೆಡಿಬಲ್ ಇಂಡಿಯಾ ರಾಯಭಾರಿ ಸ್ಥಾನದಿಂದ ಕೈಬಿಟ್ಟಿದ್ದ ಕೇಂದ್ರ ಸರ್ಕಾರ ಈಗ ರಸ್ತೆ ಸುರಕ್ಷತಾ ಪ್ರಚಾರಾಂದೋಲನದಿಂದಲೂ ಕೈಬಿಡಲಾಗಿದೆ.
ಟೆಲೆಗ್ರಾಫ್ ವರದಿಯ ಪ್ರಕಾರ, ಅಸಹಿಷ್ಣುತೆ ಕುರಿತ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ 2014 ರಲ್ಲಿ ಅಮೀರ್ ಖಾನ್ ಅವರನ್ನು ರಸ್ತೆ ಸುರಕ್ಷತಾ ಪ್ರಚಾರಾಂದೋಲನದಿಂದಲೂ ಕೈಬಿಡಲಾಗಿದೆ.
ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಪ್ರಸಾರಗೊಂಡ ‘ರಸ್ತೆ ಅಪಘಾತಗಳೋ ಅಥವಾ ಕೊಲೆಗಳೋ?’ಎಂಬ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಮೀರ್ ಖಾನ್ ಅವರನ್ನು ರಸ್ತೆ ಸುರಕ್ಷತಾ ಪ್ರಚಾರಾಂದೋಲನದ ರಾಯಭಾರಿಯನ್ನಾಗಿ 2014 ಡಿಸೆಂಬರ್ ನಲ್ಲಿ ನೇಮಕ ಮಾಡಿದ್ದರು.
ಜನಸಾಮಾನ್ಯರಿಗೆ ಸಂಚಾರದ ಅರಿವು ಮೂಡಿಸಲು ಬ್ಯಾನರ್ ಮತ್ತು ಟಿ ವಿ ಜಾಹೀರಾತಿನಲ್ಲಿ ಅಮೀರ್ ಅವರನ್ನು ಬಿಂಬಿಸಲು ಓಗಿಲ್ವಿ ಮತ್ತು ಮ್ಯಾಥರ್ ಇಂಡಿಯಾ ಜಾಹೀರಾತು ಸಂಸ್ಥೆ ಮುಖ್ಯಸ್ಥ ಪಿಯೂಶ್ ಪಾಂಡೆ ಅವರಿಗೆ ಹೊಣೆಗಾರಿಕೆ ವಹಿಸಿದ್ದರು. ಆದರೆ ಇದೀಗ ಆಮೀರ್ ಬದಲಿಗೆ ಬೇರೆವರಿಗಾಗಿ ಹುಡುಕಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics