ಬೆಂಗಳೂರು: ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ಹಿರಿಯ ವಿಚಾರವಾದಿಗಳ ಕೊಲೆಯಗಿ ತಿಂಗಳುಗಳೇ ಉರುಳುತ್ತಿದ್ದರೂ ಆರೋಪಿಗಳು ಪತ್ತೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಉಭಯ ರಾಜ್ಯಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುತ್ತಿವೆ. ಇದೀಗ ಕರ್ನಾಟಕ ಪೊಲೀಸರ ಮೇಲೆ ಮಹಾರಾಷ್ಟ್ರ ಸಿಐಡಿ, ಸಿಬಿಐ ಗಂಭೀರ ಆರೋಪ ಹೊರಿಸಿದ್ದರೆ, ಕರ್ನಾಟಕ ಪೊಲೀಸರು ಪ್ರತ್ಯಾರೋಪ ಮಾಡುವ ಮೂಲಕ ಕೈ ತೊಳೆದುಕೊಂಡಿದ್ದಾರೆ. ಇತ್ತೀಚೆಗೆ ಬಾಂಬೆ ಹೈಕೋರ್ಟಿನಲ್ಲಿ ದಾಭೋಲ್ಕರ್ ಪ್ರಕರಣ ಯಾಕೆ ಮಂದಗತಿಯಲ್ಲಿ ಸಾಗುತ್ತಿದೆಂದು ನ್ಯಾ. ಆರ್ ವಿ ಮೋರೆ, ವಿ ಎಲ್ ಅಚಿಲಿಯ ಪ್ರಶ್ನಿಸಿದ್ದರು.
ಅದಕ್ಕೆ ಸಿಬಿಐ ಪರ ವಕೀಲಕಿ ಅನಿಲ್ ಸಿಂಗ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೀಪ್ ಶಿಂಧೆ ಕರ್ನಾಟಕ ರಾಜ್ಯ ಸಿಐಡಿ ತಂಡ ಸರಿಯದ ಸಹಕಾರ ನೀಡುತ್ತಿಲ್ಲ. ಬ್ಯಾಲೆಸ್ಟಿಕ್ ವರದಿ ನೀಡಲು ಕೇಳಿ ಹಲವು ತಿಂಗಳುಗಳೇ ಕಳೆದರೂ ಇನ್ನೂ ವರದಿ ಕೈಸೇರಿಲ್ಲ. ಈ ಕಾರಣ ವಿಚಾರಣೆ ನಿಧಾನಗತಿಯಲ್ಲಿ ಸಾಗಿದೆ ಎಂದರು. ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಪ್ರತಿಕ್ರಿಯಿಸಿ, ದೇಶದ ಯವುದೇ ತನಿಖೆ ತಂಡಗಳು ಸಹಕಾರ ಕೇಳಿದರೂ ಕರ್ನಾಟಕ ಪೊಲೀಸ್ ಸಂಪೂರ್ಣ ಸಹಕಾರ ನೀಡುತ್ತದೆ. ಈ ಪ್ರಕರಣದಲ್ಲಿಯೂ ನಾವು ಪೂರ್ಣ ಸಹಕಾರ ನೀಡಿದ್ದೇವೆ. ಸಿಐಡಿ ಸಂಸ್ಥೆಯ ಮೇಲೆ ಮಾಡಿರೋ ಆರೋಪ ನಿಜವಲ್ಲ. ಈ ಸಂಬಂಧ ಸಿಬಿಐ ಕಡೆಯಿಂದ ಯಾವುದೇ ಪತ್ರ ಬಂದಿಲ್ಲ.
ಜೊತೆಗೆ ನಮ್ಮಿಂದ ತೊಂದರೆಯಾಗಿದೆ ಎಂದು ಸಿಬಿಐ ಅಥವಾ ಮಹಾರಾಷ್ಟ್ರ ಪೊಲೀಸರು ನಮಗೆ ತಿಳಿಸಿಲ್ಲ ಎಂದು ಹೇಳುವ ಮೂಲಕ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಮಹಾರಾಷ್ಟ್ರ ಹೈಕೋರ್ಟಿನ ದ್ವಿಸದಸ್ಯ ಪೀಠ, ಸಿಬಿಐನ ಆರೋಪಕ್ಕೆ ಬೇಸರ ವ್ಯಕ್ತಪಡಿಸಿತ್ತು. ದೇಶದ ತನಿಖಾ ತಂಡವಾದ ಸಿಬಿಐಗೆ ಕರ್ನಾಟಕದ ಸಿಐಡಿ ಸಹಕರಿಸುತ್ತಿಲ್ಲ ಅನ್ನೋ ಆರೋಪವನ್ನ ಬಹಳ ಗಂಭೀರವಾಗಿ ಪರಿಗಣಿಸಿತ್ತು. ತಕ್ಷಣವೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ವರದಿ ಪಡೆಯುವಂತೆ ಕೋರ್ಟ್ ತಿಳಿಸಿತ್ತು. ಆದರೆ, ಸಿಬಿಐ ಕಡೆಯಿಂದಾಗಲೀ ಮಹಾರಾಷ್ಟ್ರ ಪೊಲೀಸರ ಕಡೆಯಿಂದಾಗಲೀ ಪತ್ರ ಅಥವಾ ದೂರವಾಣಿ ಸಂಪರ್ಕ ಇನ್ನೂವರೆಗೂ ಆಗಿಲ್ಲ ಎಂಬುದು ರಾಜ್ಯ ಪೊಲೀಸರ ಪ್ರತ್ಯಾರೋಪವಾಗಿದೆ.
ಪ್ರತಿಕ್ರಿಯಿಸಲು ನಿರಾಕರಿಸಿದ ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಸಿಬಿಐ, ಸಿಐಡಿ ಅಥವಾ ಕೋರ್ಟಿನಿಂದ ಯಾವುದೇ ರೀತಿಯ ಪತ್ರ ಬಂದಿಲ್ಲ. ಬ್ಯಾಲೆಸ್ಟಿಕ್ ಪರಿಣಿತರು ವರದಿನ್ನು ನೀಡಿದ ನಂತರ ಸಿಬಿಐಗೆ ಹಸ್ತಾಂತರಿಸುತ್ತೇವೆ ಎಂದರು. ಇನ್ನು ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯ ಬಗ್ಗೆ ಮಾತನಾಡಿ ತನಿಖೆ ನಡೆಯುತ್ತಿದೆ. ಈಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಷ್ಟೇ ತಿಳಿಸಿದರು. ಒಂದು ಕಡೆ ರಾಜ್ಯ ಸಿಐಡಿ ಸಹಕರಿಸುತ್ತಿಲ್ಲ ಎಂದು ಸಿಬಿಐ ಆರೋಪಿಸಿದರೆ, ಈ ಆರೋಪ ಸುಳ್ಳು ಎಂದು ಕರ್ನಾಟಕ ಪೊಲೀಸರು ಹೇಳಿದ್ದಾರೆ. ಈ ರೀತಿಯ ಸಂವಹನದ ಕೊರತೆಯಿಂದ ಪ್ರಕರಣದ ತನಿಖೆ ಹಳ್ಳ ಹಿಡಿಯದಿದ್ದರೆ ಸಾಕು ಎಂದು ಸಾವಿಗೀಡಾದ ವಿಚಾರವಾದಿಗಳ ಅನುಯಯಿಗಳ ಆಶಯವಾಗಿದೆ.