ನರೇಂದ್ರ ಮೋದಿ 
ಪ್ರಧಾನ ಸುದ್ದಿ

'ಸ್ಟಾರ್ಟ್‌ ಅಪ್‌ ಇಂಡಿಯಾ'ಗೆ ಕೇಂದ್ರದ ಮೊದಲ ಆದ್ಯತೆ: ಪ್ರಧಾನಿ ಮೋದಿ

ಜೀವನ ವಿಧಾನ ಬದಲಿಸುವ 'ಸ್ಟಾರ್ಟ್‌ ಅಪ್‌ ಇಂಡಿಯಾ'ಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

ನವದೆಹಲಿ: ಜೀವನ ವಿಧಾನ ಬದಲಿಸುವ 'ಸ್ಟಾರ್ಟ್‌ ಅಪ್‌ ಇಂಡಿಯಾ'ಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ "ಸ್ಟಾರ್ಟ್‌ ಅಪ್‌ ಇಂಡಿಯಾ' ಅಭಿಯಾನಕ್ಕೆ ಚಾಲನೆ ನೀಡಿ ಮಾತಮಾಡಿದ ಮೋದಿ,  'ಸ್ಟಾರ್ಟ್‌ ಅಪ್‌ ಇಂಡಿಯಾ' ಯುವಕರಿಗೆ ಹೊಸ ಹಾದಿ ತೋರಿಸಲಿದೆ. ಯುವ ಜನಾಂಗದಲ್ಲಿ ಉದ್ಯಮ ಶೀಲತೆಯ ಹೊಸ ಆಲೋಚನೆಗಳು ಇರುತ್ತವೆ. ಆದರೆ ಕೆಲವರು ಅಂತಹ ಕನಸನ್ನು ಅರ್ಧದಲ್ಲೇ ಕೈಬಿಡುತ್ತಾರೆ; ಕೆಲವೇ ಕೆಲವರು ಮಾತ್ರವೇ ತಮ್ಮ ಆಲೋಚನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಸಂಕಲ್ಪ ಹೊಂದಿ ಯಶಸ್ವಿಯಾಗುತ್ತಾರೆ ಮತು ಕನಸನ್ನು ನನಸುಗೊಳಿಸುತ್ತಾರೆ' ಎಂದರು.
"ನಾವಿಲ್ಲಿ ಇರುವುದೇ ಯುವ ಜನಾಂಗದಲ್ಲಿನ ಉದ್ಯಮ ಶೀಲತೆಯ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನಕ್ಕೆ ನೆರವಾಗಲು; ಆದುದರಿಂದ ನಾವು ನಿಮಗಾಗಿ ಏನು ಮಾಡಬೇಕು ಎಂಬುದನ್ನು ನೀವು ಯುವಕರು ನಮಗೆ ಹೇಳಬೇಕು; ನಾನು ಈ ಹಿಂದೆಯೇ ಕೆಂಪುಕೋಟೆಯ ಮೇಲಿಂದ ಮಾಡಿದ ಭಾಷಣದಲ್ಲಿ ಸ್ಟಾರ್ಟ್‌ ಅಪ್‌ ಇಂಡಿಯಾ ಅಭಿಯಾನದ ಬಗ್ಗೆ ಹೇಳಿದ್ದೇನೆ. ಅದೇನೆಂಬುದನ್ನು ನಾವೀಗ ನೋಡುತ್ತಲಿದ್ದೇವೆ' ಎಂದು ಮೋದಿ ಹೇಳಿದರು.
ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ಮಾತನಾಡಿ "1991ಕ್ಕೆ ಮುನ್ನ ಯಾವೆಲ್ಲ ಕಂಪೆನಿಗಳು ಅಗ್ರ ಸ್ಥಾನದಲ್ಲಿದ್ದವೋ ಅವೆಲ್ಲವೂ ಅನಂತರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಂಪೆನಿಗಳಿಂದ ಸ್ಥಾನಾಂತರಗೊಂಡಿವೆ. ಈ ಹೊಸ ಕಂಪೆನಿಗಳು ಮಾಡಿದವರಲ್ಲಿ ಹೆಚ್ಚಿನವರು ಉದ್ಯಮ-ಕುಟುಂಬಗಳಿಂದ ಬಂದವರಲ್ಲ' ಎಂದು ಹೇಳಿದರು.
ಇಂದಿನ ಈ ಸುದಿನವು ಯುವ ಉದ್ಯಮಶೀಲರಲ್ಲಿ ಹೊಸ ಮನೋಭಾವ ಸೃಷ್ಟಿಸುವಂತಿದೆ; ದೇಶದಲ್ಲಿ ಯುವ ಜನರಿಂದ ಹೊಸ ಔದ್ಯಮಿಕ ಕ್ರಾಂತಿಯಾಗಲಿದೆ ಎಂದು ಜೇಟ್ಲಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!