ಪ್ರಧಾನ ಸುದ್ದಿ

೨೦೧೪ ಪ್ರಚೋದನಾಕಾರಿ ಭಾಷಣ ಪ್ರಕರಣದಿಂದ ಅಮಿತ್ ಷಾಗೆ ಕ್ಲೀನ್ ಚಿಟ್

Guruprasad Narayana

ಮುಜಫರ್ ನಗರ್: ಏಪ್ರಿಲ್ ೨೦೧೪ ಲೋಕಸಭಾ ಚುನಾವಣಾ ಸಮಯದಲ್ಲಿ ಮುಜಫರ್ ನಗರದಲ್ಲಿ ಅಮಿತ್ ಷಾ ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಬಿಜೆಪಿ ಅಧ್ಯಕ್ಷ ಆರೋಪ ಮುಕ್ತ ಎಂದು ಕ್ಲೀನ್ ಚಿಟ್ ನೀಡಿದ್ದಾರೆ.

ಪ್ರಾದೇಶಿಕ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿರುವ ಪೊಲೀಸರು "ಅವರ (ಅಮಿತ್ ಷಾ) ವಿರುದ್ಧ ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ" ಎಂದು ತಿಳಿಸಿದ್ದಾರೆ.

ಈಗ ಈ ಅಂತಿಮ ವರದಿ ಮೆಜೆಸ್ಟ್ರೆಟ್ ಎದುರು ಬಂದಿದ್ದು ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಏಪ್ರಿಲ್ ೨೦೧೪ ಲೋಕಸಭಾ ಚುನಾವಣಾ ಸಮಯದಲ್ಲಿ  ಮುಜಫರ್ ನಗರದ ಬರ್ವಾರ್ ಗ್ರಾಮದಲ್ಲಿ ಪ್ರಚೋದನಕಾರಿ ಬಾಷಣ ಮಾಡಿದ್ದರು ಎಂದು ಆರೋಪಿಸಿ, ಕಕೋರ್ಲಿ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು. ಆ ಭಾಷಣದಲ್ಲಿ ಷಾ "ಮೋದಿ ಗೆದ್ದರೆ. 'ಮುಲ್ಲಾ' ಮುಲಾಯಂ ಸರ್ಕಾರ ಪತನವಾಗುತ್ತದೆ" ಎಂದಿದ್ದರು ಎಂದು ಆರೋಪಿಸಲಾಗಿತ್ತು.
 

SCROLL FOR NEXT