ನವದೆಹಲಿಯಲ್ಲಿ ಪೊಲೀಸ್ ಕಟ್ಟೆಚ್ಚರ
ನವದೆಹಲಿ: ಗಣರಾಜ್ಯೋತ್ಸವದಂದು ಭಾರತದ ಮೇಲೆ ದಾಳಿ ಮಾಡಲು ಇಸಿಸ್ ಸಂಚು ರೂಪಿಸಿದೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಾಜಧಾನಿ ನವದೆಹಲಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಭಾನುವಾರ ಸಂಜೆ ಇಲ್ಲಿನ ಲೋಧಿ ಗಾರ್ಡನ್‌ನಲ್ಲಿ ಇಂಡಿಯನ್ ಆರ್ಮಿ ಸ್ಟಿಕರ್ ಅಂಟಿಸಿದ್ದ ಹುಂಡೈ ಸ್ಯಾಂಟ್ರೋ ಕಾರು ಕಳವು ಆಗಿದೆ.
ಮಾಧ್ಯಮ ವರದಿಗಳ ಪ್ರಕಾರ ಏಖ 51ಖಿ 6646 ನೋಂದಣಿ ಸಂಖ್ಯೆಯ ಕಾರು ಕಳವು ಆಗಿದೆ. ಆರ್ಮಿ ಆಸ್ಪತ್ರೆಯ ಸಿಬ್ಬಂದಿಯವರ ಕಾರು ಇದಾಗಿದ್ದು, ಕಾರು ಪತ್ತೆಗಾಗಿ ಶೋಧ ಮುಂದುವರಿದಿದೆ.
ಪಠಾಟ್‌ಕೋಟ್ ವಾಯನೆಲೆಯ ಮೇಲೆ ದಾಳಿ ಮಾಡುವ ಮುನ್ನವೂ ಇಂಥದ್ದೇ ಘಟನೆ ನಡೆದಿತ್ತು. ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ಅಪಹರಣ ಮಾಡಿ ಉಗ್ರರು ಅವರ ಕಾರನ್ನು ಕದ್ದಿದ್ದರು. ಈ ಘಟನೆಯ ನಂತರ ವಾಯುನೆಲೆ ಮೇಲೆ ದಾಳಿ ನಡೆದಿತ್ತು.
ಅದೇ ವೇಳೆ ಇಸ್ಲಾಮಿಕ್ ಸ್ಟೇಟ್‌ನ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿ ಗಣರಾಜ್ಯೋತ್ಸವದಂದೇ ಭಾರತದ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.
ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ ಈಗಾಗಲೇ 14 ಶಂಕಿತ ಉಗ್ರರನ್ನು ಬಂಧಿಸಿದೆ.