ನವದೆಹಲಿ: ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಎಂ. ಚಂದ್ರಶೇಖರ್ ಸೇರಿದಂತೆ ರಾಜ್ಯದ ಹಲವು ಪೊಲೀಸ್ ಅಧಿಕಾರಿಗಳಿಗೆ ಅವರ ಶ್ಲಾಘನೀಯ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಪದಕ ನೀಡಲಾಗಿದೆ.
ಗಣರಾಜ್ಯೋತ್ಸವದಂದು ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ, ಎಂ.ಚಂದ್ರಶೇಖರ್, ಬೆಂಗಳೂರು ಜಂಟಿ ಆಯುಕ್ತೆ(ಗುಪ್ತದಳ) ಡಿ.ರೂಪಾ, ಮೈಸೂರು ಡಿಸಿಪಿ, ನಾರಾಣಯ ಬಿರ್ಜೆ, ಬೆಂಗಳೂರು ಸಿಸಿಬಿ ಎಸಿಪಿ ಎನ್.ಸಿ.ಶಂಕರಯ್ಯ, ಏರ್‌ಪೋರ್ಟ್ ಉಪ ವಿಭಾಗ ಎಸಿಪಿ ಎಸ್.ಎಚ್. ದುಗ್ಗಪ್ಪ, ಮೈಸೂರು ದೇವರಾಜ ಉಪ ವಿಭಾಗದ ಎಸಿಪಿ ಗಿರಿಜೇಶ್, ಮಂಗಳೂರು ಉತ್ತರ ವಿಭಾಗದ ಎಸಿಪಿ, ಎಂ.ಗಾಂವ್ಕರ್, ಕೆಪಿಎ ಸಹಾಯಕ ನಿರ್ದೇಶಕ ಎಂ.ಎಸ್.ಬುಕ್ಕನವರ್ ಹಾಗೂ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಡಿ.ವೆಂಕಟಸ್ವಾಮಿ ಅವರು ಆಯ್ಕೆಯಾಗಿದ್ದಾರೆ.
ಇನ್ನು ಈಶಾನ್ಯ ವಲಯ ಐಜಿಪಿ ಸುನಿಲ್ ಅಗರವಾರ್ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ನೀಡಲಾಗಿದೆ.