ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಇನ್ನು ಮುಂದೆ ವ್ಯಾಪಾರ ವಹಿವಾಟು ಮಾಡುವವರಿಗೆ ಪಾಲಿಕೆ ಆರಂಭದಲ್ಲೇ ಬರೆ ಎಳೆಯಲು ಮುಂದಾಗಿದೆ. ಕಾರಣ ಪಾಲಿಕೆ ನೀಡುವ ಪರವಾಗಿ ಶುಲ್ಕವನ್ನು ಕನಿಷ್ಠ ಪಕ್ಷ ಎರಡು ಪಟ್ಟು ಹೆಚ್ಚಳ ಮಾಡಿದೆ. ಅಷ್ಟೇ ಅಲ್ಲ, ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಅಂಗಡಿ ಮುಂಗಟ್ಟುಗಳ ಪರವಾನಗಿ ದರವನ್ನೂ ಏರಿಸಿದೆ.
ಹೋಟೆಲ್, ರೆಸ್ಟೋರೆಂಟ್, ತಿಂಡಿ ತಿನಿಸುಗಳ ಅಂಗಡಿ ಮುಂಗಟ್ಟುಗಳು, ಆಹಾರ ತಯಾರಿಕೆ ವಸ್ತುಗಳಿಗೆ ಸಂಬಂಧಿಸಿದ ಕೈಗಾರಿಕಾ ಪ್ರದೇಶಗಳಿಗೆ ನೀಡುವ ಪರವಾನಗಿ ಶುಲ್ಕವನ್ನು ಪಾಲಿಕೆ ಹೆಚ್ಚಿಸಿದೆ.
ಫೆ.1 ರಿಂದ ನೂತನ ದರ ಅನ್ವಯವಾಗಲಿದೆ. ಕರ್ನಾಟಕ ಕಾರ್ಪೊರೇಷನ್ ಕಾಯ್ದೆ ಪ್ರಕಾರ ಪಾಲಿಕೆ ವ್ಯಾಪ್ತಿಯ ಆರೋಗ್ಯ ಇಲಾಖೆಗಳ ಪರವಾನಗಿ ದರವನ್ನು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯು ಪ್ರಕಟಿಸಿದೆ. ಕಳೆದ ನ.2 ರಂದು ನಡೆದ ಪಾಲಿಕೆ ಸಭೆಯಲ್ಲಿಯೇ ಪರವಾನಗಿ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿದೆ.
10 ಎಚ್ ಪಿಗಿಂತ ಹೆಚ್ಚಿನ ವಿದ್ಯುತ್ ಬಳಸಿ ತಯಾರಿಸಿರುವಂತಹ ಬ್ರೆಡ್, ಬಿಸ್ಕತ್, ಹ್ಯಾಸ್ತ್ರಿ, ಕಾನ್ ಫೆಶ್ನರಿ, ಕಾಂಡಿ ಮೆಂಟ್ಸ್ ತಿಂದಿ ತಿನಿಸುಗಳ ತಯಾರಿಸುವ ಸಂಸ್ಥೆಗಳ ಪರವಾನಗಿಗೆ ದುಪ್ಪಟ್ಟು ಬೆಲೆ ಹೆಚ್ಚಳವಾಗಿದೆ.
ಆಹಾರೇತರ ಪದಾರ್ಥಗಳು
ಇಟ್ಟಿಗೆ ಮೋಲ್ಡಿಂಗ್ ಮತ್ತು ಸುಡುವುದು, ಸಿಮೆಂಟ್ ಇಟ್ಟಿಗೆ, ವಿದ್ಯುತ್ ಬಳಸಿ ತಯಾರಿಸುವ ಚಾವಣಿ ಟೈಲ್ಸ್ ಗಳು, ಗ್ರಾನೈಟ್, ಮಾರ್ಬಲ್ ಮತ್ತು ಕಡಪ ಕಲ್ಲುಗಳ ಶೇಖರಣೆ, ಕತ್ತರಿಸುವುದು ಮತ್ತು ಮಾರಾಟ, ಪೇಂಟ್, ಲ್ಯಾಕರ್ ಮತ್ತು ಶೆರಾಕ್ ತಯಾರಿಕೆ, ಮಾರಾಟಕ್ಕೆ ಟಾರ್ ಶೇಖರಣೆ, ಮರದ ದಿಮ್ಮಿ ಶೇಖರಣೆ ಮತ್ತು ಮಾರಾಟ, ವಿದ್ಯುಚ್ಛಕ್ತಿ ಅಥವಾ ಜನರೇಟರ್ ಬಳಸಿ ಕೈಗಾರಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಚಾಲಿತ ಯಂತ್ರೋಪಕರಣಗಳು, ಮನರಂಜನೆ ವ್ಯಾಪಾರ ಪ್ರದರ್ಶನ ಕೇಂದ್ರಗಳು ಮತ್ತು ಚಿತ್ರಮಂದಿಗಳಿಗೆ ದರ ದುಪ್ಪಟ್ಟಾಗಿದೆ.
ಅಡುಗೆ, ಅಡುಗೆಯೇತರ ಎಣ್ಣೆ ಶೇಖರಣೆ, ಪ್ಯಾಕಿಂಗ್ ಪ್ರೆಸ್ಸಿಂಗ್, ಸ್ವಚ್ಛಗೊಳಿಸುವಕೆ, ತುಪ್ಪದ ತಯಾರಿಕೆ ಪ್ಯಾಕಿಂಗ್ ಉತ್ಪಾದನಾ ಸಂಸ್ಥೆಗಳಿಗೂ ದುಪ್ಪಟ್ಟು ದರ ಏರಿಕೆಯಾಗಿದೆ. ಆಹಾರ ಪದಾರ್ಥಗಳು, ಪಾನೀಯ ಅಥವಾ ಮದ್ಯ ಸೇವನೆ, ಪಂಚತಾರಾ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಮೂರು ಪಟ್ಟು ಹೆಚ್ಚಳವಾಗಿದೆ.
ಕೋಳಿ, ಹಂದಿ, ಹಸುವಿನ ಮಾಂಸದಂಗಡಿಗಳು, ಸಾರ್ವಜನಿಕ ತಂಗುದಾಣ ಸ್ಥಳಗಳಾದ ಬೋರ್ಡಿಂಗ್, ಲಾಡ್ಡಿಂಗ್, ಛತ್ರಗಳು, ಮದುವೆ ಮಂಟಪಗಳು, ಸಮಾವೇಶ ಕೇಂದ್ರ, ರಕ್ತ ಶೇಖರಣೆ, ಸಂಸ್ಕರಣೆ, ನರ್ಸಿಂಗ್ ಹೋಮ್, ಆಸ್ಪತ್ರೆಗಳು ಪಾಲಿ ಕ್ಲಿನಿಕ್, ತಜ್ಞರ ಕ್ಲಿನಿಕ್ ಗಳು, ಲ್ಯಾಬೋರೇಟರಿಗಳು, ಎಂಆರ್ಐ, ಸಿಟಿ ಅಲ್ಟ್ರಾ ಸೌಂಡ್ ಸ್ಕ್ಯಾನ್, ಕ್ಷೌರಿಕ ಅಂಗಡಿಗಳಿಗೆ ದರ ಹೆಚ್ಚಳವಾಗಿದೆ.
ಆಹಾರೇತರ ಇಲಾಖೆ
ಕೈಗಾರಿಕೆಗಳಲ್ಲಿ ಆಹಾರೇತರ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳಲ್ಲಿ ತಯಾರಾಗುವ ಬೀಡಿಗಳು, ಆಟೋ ಮೊಬೈಲ್ ಬ್ಯಾಟರಿ ತಯಾರಿಕೆ, ಶೇಖರಣೆ, ಮದ್ದುಗುಂಡು ಮತ್ತು ಪಟಾಕಿ ತಯಾರಿಕೆ, ಮೇಣದ ಬತ್ತಿ ತಯಾರಿಕೆ, ಶೇಖಱಣೆ ಮತ್ತು ಮಾರಾಟ, ಕಾರ್ಪೆಟ್, ಕರ್ಪೂರ ತಯಾರಿಕೆ, ಹತ್ತಿ, ಉಣ್ಣೆ, ಸೆಣಬು ಸಗಟು ವ್ಯಾಪರ, ಕಲ್ಲಿದ್ದಲು, ಸೌದೆ ಎಲ್ಲ ರೀತಿಯ ರಾಸಾಯನಿಕ ಕ್ರಿಮಿನಾಶಕಗಳು, ಕೀಟನಾಶಕಗಳ ಮಿಶ್ರಣ, ಶೇಖರಣೆ, ಮಾರಾಟ, ಡ್ರೈ ಕ್ಲೀನಿಂಗ್ ಮತ್ತು ಲಾಂಡ್ರಿ,, ಟ್ರಾನ್ಸ್ ಫಾರ್ಮರ್, ಲೂಬ್ರಿಕೇಟಿಂಗ್ ಆಯಿಲ್, ಗ್ರೀನ್ ಸಾಲ್ವೆಂಟ್, ಚಿಲ್ಲರೆ ವಿತರಣೆಗಾಗಿ ಅನಿಲ ಶೇಖರಣೆ, ಎಲ್ಲಕ್ಟ್ರೋ ಪ್ಲೇಟಿಂಗ್, ನೀರಿನ ಟ್ಯಾಂಕರ್ ಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಪರವಾನಗಿ ಶುಲ್ಕ ಹೆಚ್ಚಳ ಮಾಡಲಾಗಿದೆ.