ಪ್ರಧಾನ ಸುದ್ದಿ

ಖಾಸಗಿ ಬಸ್ ಗಳ ನಿಷೇಧದ ವಿರುದ್ಧ ಪಿಐಎಲ್: ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ವರ್ಗ

Lingaraj Badiger
ಬೆಂಗಳೂರು: ಭಾರಿ ಗೊಂದಲದ ಜೊತೆಗೆ ತೀವ್ರ ವಿರೋಧಕ್ಕೂ ಕಾರಣವಾಗಿದ್ದ  ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿಗಳ ಬೆಂಗಳೂರು ನಗರ ಪ್ರವೇಶ ನಿಷೇಧದ ವಿರುದ್ಧ ಸೋಮವಾರ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಫೆಬ್ರವರಿ 3ರಿಂದ 5ರವರೆಗೆ ನಡೆಯುವ ಇನ್ವೆಸ್ಟ್ ಕರ್ನಾಟಕ ಹಿನ್ನೆಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಬೆಳಗ್ಗೆ 7ರಿಂದ ರಾತ್ರಿ 10 ಗಂಟೆಯವರೆಗೆ ಖಾಸಗಿ ಬಸ್ ಗಳ ಪ್ರವೇಶ ನಿಷೇಧಿಸಲಾಗಿದೆ.
ಈ ನಿಷೇಧವನ್ನು ಪ್ರಶ್ನಿಸಿ ನವೀನ್ ಎಂಬುವವರು ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್, ಇದು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವುದರಿಂದ ಏಕ ಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿದೆ.
ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ಕಾರ್ಯದರ್ಶಿ ಸುಭ್ರೊ ಕಮಲ್ ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ್ ಅವರನ್ನೊಳಗೊಂಡ ಪೀಠ, ಅರ್ಜಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವುದರಿಂದ ಅದು ಏಕ ಸದಸ್ಯ ಪೀಠದಲ್ಲೇ ವಿಚಾರಣೆಯಾಗಬೇಕು ಎಂದು ಹೇಳಿದ್ದಾರೆ.
ಖಾಸಗಿ ಬಸ್ ಗಳು ಮಾತ್ರವಲ್ಲ, ಸಣ್ಣ ಮತ್ತು ಮಧ್ಯ ಗಾತ್ರದ ಗೂಡ್ಸ್ ವಾಹನಗಳನ್ನು ಸಹ ನಿಷೇಧಿಸಲಾಗಿದೆ ಎಂದು ಸರ್ಕಾರಿ ವಕೀಲ ವರದಿ ಸಲ್ಲಿಸಿದರು. ಅಲ್ಲದೆ ಅರ್ಜಿ ಖಾಸಗಿ ಹಿತಾಸಕ್ತಿ ಒಳಗೊಂಡಿದ್ದು, ಅರ್ಜಿದಾರ ಈ ಸಂಬಂಧ ಹೊರಡಿಸಲಾದ ಎರಡು ಅಧಿಸೂಚನೆಗಳನ್ನು ಪ್ರಶ್ನಿಸಿಲ್ಲ ಎಂದು ವರದಿ ನೀಡಿದರು.
ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲರು, ಈ ನಿಷೇಧದಿಂದಾಗಿ ನಗರಕ್ಕೆ ಭೇಟಿ ನೀಡುವ ಪ್ರಾವಾಸಿಗರ ವಾಹನಗಳಿಗೆ ತೊಂದರೆಯಾಗಲಿದೆ ಎಂದರು. ವಾದ ಪ್ರತಿವಾದ ವಿಭಾಗೀಯ ಪೀಠ, ಏಕಸದಸ್ಯ ಪೀಠದಲ್ಲಿ ಮನವಿ ಮಾಡಿ ಎಂದು ಸೂಚಿಸಿತು.
SCROLL FOR NEXT