ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಿಗಜಿಣಗಿ 
ಪ್ರಧಾನ ಸುದ್ದಿ

19 ನೂತನ ಕೇಂದ್ರ ಸಚಿವರಿಂದ ಪ್ರಮಾಣ ವಚನ

ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದು, 6 ಹಾಲಿ ಸಚಿವರಿಗೆ ಕೊಕ್ ನೀಡಿ ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ ಒಟ್ಟು 19 ನೂತನ ಸಚಿವರು ಕೇಂದ್ರ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ...

ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದು, 6 ಹಾಲಿ ಸಚಿವರಿಗೆ ಕೊಕ್ ನೀಡಿ ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ ಒಟ್ಟು 19 ನೂತನ ಸಚಿವರು ಕೇಂದ್ರ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ  ಸಂಪುಟ ದರ್ಜೆ ಸಚಿವರಾಗಿ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲ 19 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಂತಿದೆ.
1. ಅರ್ಜುನ್ ರಾಮ್ ಮೇಘ್ವಾಲ್ (ಬಿಜೆಪಿ ಸಂಸದ, ರಾಜಸ್ತಾನ)
2. ರಮೇಶ್ ಜಿಗಜಿಣಗಿ (ಬಿಜೆಪಿ ಸಂಸದ, ಕರ್ನಾಟಕ)
3. ಪಿಪಿ ಚೌದರಿ (ಬಿಜೆಪಿ ಸಂಸದ, ರಾಜಸ್ತಾನ)
4. ಸುಭಾಷ್ ರಾಮ್ ರಾವ್ ಭಮ್ರೆ (ಬಿಜೆಪಿ ಸಂಸದ, ಮಹಾರಾಷ್ಟ್ರ)
5. ಎಂಜೆ ಅಕ್ಬರ್  (ಬಿಜೆಪಿ ಸಂಸದ, ಮಧ್ಯ ಪ್ರದೇಶ)
6. ಅನಿಲ್ ಮಾಧವ್ ಡಾವೆ (ರಾಜ್ಯಸಭಾ ಸದಸ್ಯ, ಮಧ್ಯ ಪ್ರದೇಶ)
7. ಫಗ್ಗಾನ್ ಸಿಂಗ್ ಕುಲಸ್ಟೆ (ಬಿಜೆಪಿ ಸಂಸದ, ಮಧ್ಯ ಪ್ರದೇಶ)
8. ವಿಜಯ್ ಗೋಯೆಲ್ (ಬಿಜೆಪಿ ರಾಜ್ಯಸಭಾ ಸದಸ್ಯ, ರಾಜಸ್ತಾನ)
9. ಪುರುಷೋತ್ತಮ ರೂಪಾಲ (ಬಿಜೆಪಿ ಉಪಾಧ್ಯಕ್ಷ)
10. ಜಸ್ವಂತ್ ಸಿಂಗ್ ಭಬೋರ್ (ಬಿಜೆಪಿ ಸಂಸದ, ಗುಜರಾತ್)
11. ಮಹೇಂದ್ ನಾಥ್ ಪಾಂಡೆ (ಬಿಜೆಪಿ ಸಂಸದ, ಉತ್ತರ ಪ್ರದೇಶ)
12. ಅನುಪ್ರಿಯಾ ಪಟೇಲ್ (ಅಪ್ನಾದಳ್ ಎಂಪಿ, ಉತ್ತರ ಪ್ರದೇಶ)
13. ಮನ್ಸುಖ್ ಮಾಂಡವಿಯಾ (ಬಿಜೆಪಿ ಸಂಸದ, ಗುಜರಾತ್)
14. ಅಜಯ್ ತಮ್ಟಾ (ಬಿಜೆಪಿ ಎಂಪಿ, ಉತ್ತರಖಂಡ)
15. ರಾಮ್ ದಾಸ್ ಅಥಲ್ವಾಲೆ (ಆರ್ ಪಿಐ ಮುಖಂಡ)
16. ಕೃಷ್ಣ ರಾಜ್ (ಬಿಜೆಪಿ ಸಂಸದೆ, ಉತ್ತರ ಪ್ರದೇಶ)
17. ಸಿ ಆರ್ ಚೌದರಿ (ಬಿಜೆಪಿ ಸಂಸದ, ರಾಜಸ್ತಾನ)
18. ರಾಜನ್ ಗೊಹೆನ್ (ಬಿಜೆಪಿ ಸಂಸದ, ಅಸ್ಸಾಂ)
19. ಎಸ್ ಎಸ್ ಅಹ್ಲುವಾಲಿಯಾ (ರಾಜ್ಯಸಭಾ ಸದಸ್ಯ, ಪಶ್ಚಿಮ ಬಂಗಾಳ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!