ಭದ್ರತಾ ಪಡೆಗಳಿಂಗ ಶಸ್ತ್ರಾಸ್ತ್ರ ಕಸಿದ ಉದ್ರಿಕ್ತರು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಬರೊಬ್ಬರಿ 70 ಪೊಲೀಸ್ ಗನ್ ಗಳ ಲೂಟಿ; ಶುಕ್ರವಾರದ ಪ್ರಾರ್ಥನೆ ವೇಳೆ ಹಿಂಸಾಚಾರಕ್ಕೆ ಸಂಚು

ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಸಂಬಂಧ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮುಗಿಲು ಮುಟ್ಟಿದ್ದು, ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವಿನ ಹಿಂಸಾಚಾರ ತಾರಕ್ಕೇರಿರೆದೆ...

ಶ್ರೀನಗರ: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಸಂಬಂಧ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮುಗಿಲು ಮುಟ್ಟಿದ್ದು, ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವಿನ  ಹಿಂಸಾಚಾರ ತಾರಕ್ಕೇರಿರೆದೆ.

ಈ ನಡುವೆ ಕಳೆದ 2 ದಿನಗಳ ಹಿಂದೆ ಪ್ರತಿಭಟನಾಕಾರರ ಗುಂಪೊಂದು ಕುಲ್ಗಾಂ ನ ಧಮಾಲ್ ಹಂಜಿಪೋರಾ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಬರೊಬ್ಬರಿ 70 ಪೊಲೀಸ್ ಗನ್ ಗಳನ್ನು  ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. 2 ದಿನಗಳ ಹಿಂದೆಯೇ ಈ ಘಟನೆ ಸಂಭವಿಸಿತ್ತಾದರೂ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಗನ್ ಗಳನ್ನು ಲೂಟಿ ಮಾಡಿದ ಯುವಕರಿಗಾಗಿ  ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಇನ್ನು ಪ್ರತಿಭಟನಾಕಾರರು ಹೊತ್ತೊಯ್ದಿರುವ ಗನ್ ಗಳ ಪೈಕಿ ಸೆಮಿ ಆಟೋಮ್ಯಾಟಿಕ್ ಮತ್ತು ಆಟೋ ಮ್ಯಾಟಿಕ್ ಗನ್ ಗಳು ಸೇರಿದ್ದು, ಭದ್ರತಾ ಪಡೆಗದಳಿಗೆ ತಿರುಗೇಟು ನೀಡುವ ಸಲುವಾಗಿ  ಪ್ರತಿಭಟನಾಕಾರರು ಈ ಗನ್ ಗಳನ್ನು ಬಳಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಇಂತಹುದೇ ಮತ್ತಷ್ಟು ಘಟನೆಗಳು ಟ್ರಾಲ್ ಮತ್ತು ಕರಲ್ ಪುರ ಸೇರಿದಂತೆ ಹಲವು  ಪ್ರದೇಶಗಳಲ್ಲಿ ಸಂಭವಿಸಿದ್ದು, ಉದ್ರಿಕ್ತರ ಗುಂಪುಗಳು ಸೈನಿಕರಿಂದ ಶಸ್ತ್ರಾಸ್ತ್ರ ಕಸಿಯುವ ಪ್ರಯತ್ನ ಮಾಡಿವೆ.

ಏಕಕಾಲದಲ್ಲಿ ಇಂತಹ ಹಲವು ಪ್ರಯತ್ನಗಳು ನಡೆದಿದ್ದು, ಪ್ರಕರಣದ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆಯೇ ಎಂಬ ಶಂಕೆ ಮೂಡುತ್ತಿದೆ. ಕಾಣದ ಕೈಗಳು ಪ್ರತಿಭಟನಾಕಾರರ  ಮೇಲೆ ಪ್ರಭಾವ ಬೀರಿ ಇಂತಹ ಕೆಲಸಗಳನ್ನು ಮಾಡಿಸುತ್ತಿವೆಯೇ ಎಂಬ ಶಂಕೆ ಕೂಡ ಪೊಲೀಸರನ್ನು ಕಾಡತೊಡಗಿದೆ.

ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ವೇಳೆ ವಿಧ್ವಂಸಕ ಕೃತ್ಯಕ್ಕೆ ಸಂಚು
ಇನ್ನು ಇದೇ ಶುಕ್ರವಾರ ಪ್ರತ್ಯೇಕತಾವಾದಿ ಮುಖಂಡರು ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಬೃಹತ್ ಸಂಖ್ಯೆಯ ಮುಸ್ಲಿಂ ಯುವಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು  ಕೇಳಿಬಂದಿದ್ದು, ಈ ವೇಳೆ ವ್ಯಾಪಕ ಹಿಂಸಾಚಾರವಾಗುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಬೃಹತ್ ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮುಸ್ಲಿಂ ಯುವಕರ ದಾರಿ  ತಪ್ಪಿಸುಸವ ಕೆಲಸಕ್ಕೆ ಪ್ರತ್ಯೇಕತಾವಾದಿ ಮುಖಂಡರು ಮುಂದಾಗಿದ್ದು, ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT