ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಪಾಕಿಸ್ತಾನದ ಆಸ್ಪತ್ರೆಯ ಐ ಸಿ ಯು ನಲ್ಲಿ ಹಿಂದೂ ಯುವ ವೈದ್ಯ ನಿಗೂಢ ಸಾವು

ಕರಾಚಿಯ ನಾಗರಿಕ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐ ಸಿ ಯು) 32 ವರ್ಷದ ಯುವ ಹಿಂದೂ ವೈದ್ಯರೊಬ್ಬರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕರಾಚಿ: ಕರಾಚಿಯ ನಾಗರಿಕ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐ ಸಿ ಯು) 32 ವರ್ಷದ ಯುವ ಹಿಂದೂ ವೈದ್ಯರೊಬ್ಬರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾವು ಕೆಲಸ ಮಾಡುವ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಡಾ. ಅನಿಲ್ ಕುಮಾರ್ ಅವರ ದೇಹ ಸಿಕ್ಕಿದೆ ಎಂದು ಈದ್ಗಾ ಸ್ಟೇಷನ್ ಹೌಸ್ ಕಚೇರಿಯ ನಯೀಮುದ್ದೀನ್ ಹೇಳಿದ್ದಾರೆ. 
ಕುಮಾರ್ ಅವರು ಐ ಸಿ ಯು ಗೆ ಸುಮಾರು 5:30 ಕ್ಕೆ ತೆರಳಿದ್ದರು ನಂತರ ಮೂರೂ ಘಂಟೆಗಳ ನಂತರ ಮೃತಪಟ್ಟಿದ್ದಾರೆ ಎಂದು ಪೊಲಿಸ್ ಅಧಿಕಾರಿ ತಿಳಿಸಿದ್ದಾರೆ. ಕದ ಬಡಿದಾಗ ಅದಕ್ಕೆ ಪ್ರತಿಕ್ರಿಯಿಸದೆ ಇದ್ದಾಗ ಬಾಗಿಲು ಮುರಿದಾಗ ಕುಮಾರ್ ಖುರ್ಚಿ ಮೇಲೆ ಕೂತಿದ್ದು, ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ. ಅದೇ ಸ್ಥಳದಲ್ಲಿ ಸಿರಿಂಜ್ ಒಂದು ಕಂಡುಬಂದಿದೆ. 
"ಅವರು ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದರಿಂದ ಅವರ ಸಾವನ್ನು ತನಿಖೆ ಮಾಡಲಾಗುತ್ತಿದೆ" ಎಂದಿರುವ ಅವರು "ಅವರು ಕೈಗೆ ಇಂಜೆಕ್ಷನ್ ಕೊಟ್ಟಿಕೊಂಡಿರುವ ಸಾಧ್ಯತೆ ಇದೆ" ಎಂದು ನಯೀಮುದ್ದೀನ್ ಹೇಳಿದ್ದಾರೆ. 
ದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಸಾವಿನ ಕಾರಣಗಳನ್ನು ಕಾಯ್ದಿರಿಸಲಾಗಿದೆ ಮತ್ತು ಸಿರಿಂಜ್ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. 
ಈ ವಾರದ ಮೊದಲ ಭಾಗದಲ್ಲಿ ಹಿಂದೂ ಉದ್ದಿಮೆದಾರರನನ್ನು ಹತ್ಯೆಗೈಯ್ಯಲಾಗಿತ್ತು ಮತ್ತು ಅವರ ಹಿಂದೂ ಗೆಳೆಯನಿಗೆ ಪ್ರತಿಭಟನಾ ಗುಂಪು ಹಾನಿ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ