ಪ್ರಧಾನ ಸುದ್ದಿ

ವಿಧಾನ ಪರಿಷತ್ ನ 7 ಸ್ಥಾನಕ್ಕೆ ಮತದಾನ: ಸಂಜೆ ಮತ ಎಣಿಕೆ, ರಾತ್ರಿ ಫಲಿತಾಂಶ

Lingaraj Badiger
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ಶುಕ್ರವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಓರ್ವ ನಾಮನಿರ್ದೇಶಿತ ಸದಸ್ಯ ಸೇರಿದಂತೆ ಒಟ್ಟು 225 ಶಾಸಕರು ತಮ್ಮ ಹಕ್ಕು ಚಲಾಯಿಸಿದರು.
ಇಂದು ಬೆಳಗ್ಗೆ 9ಗಂಟೆಯಿಂದ ಮತದಾನ ಆರಂಭಗೊಂಡಿದ್ದು. ಮಧ್ಯಾಹ್ನದ ವೇಳೆಗೆ ಮುಕ್ತಾಯವಾಗಿದೆ. ಸಂಜೆ 5ಗಂಟೆಯಿಂದ ಮತಎಣಿಗೆ ಕಾರ್ಯ ನಡೆಯಲಿದ್ದು, ರಾತ್ರಿಯೊಳಗೆ ಫಲಿತಾಂಶ ಪ್ರಕಟವಾಗಲಿದೆ.
ವಿಧಾನ ಪರಿಷತ್ ಒಟ್ಟು 7 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನ ಅಲ್ಲಂ ವೀರಭದ್ರಪ್ಪ, ಆರ್ ಬಿ. ತಿಮ್ಮಾಪುರ್, ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಷದ್, ಬಿಜೆಪಿಯ ವಿ.ಸೋಮಣ್ಣ, ಲೇಹರ್ ಸಿಂಗ್ ಹಾಗೂ ಜೆಡಿಎಸ್ ನ ಕೆ.ವಿ.ನಾರಾಯಣಸ್ವಾಮಿ ಮತ್ತು ವೆಂಕಟಪತಿ ಚುನಾವಣಾ ಕಣದಲ್ಲಿದ್ದಾರೆ.
ಜೆಡಿಸ್ ಗೆ ಮತ ಹಾಕಿದ್ದೇನೆ:ಚಲುವರಾಯಸ್ವಾಮಿ
ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಂಡಾಯ ಜೆಡಿಎಸ್ ಶಾಸಕ ಜೆಡಿಎಸ್ ಶಾಸಕ ಚಲುವರಾಯಸ್ವಾಮಿ ಅವರುಸ, ನಾನು ನನ್ನ ಮತವನ್ನು ಪಕ್ಷದ ಅಭ್ಯರ್ಥಿಗೆ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.
SCROLL FOR NEXT